ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 13ನಾಮಪತ್ರಗಳು ಸಲ್ಲಿಕೆಯಾಗಿದೆ. ಗುರುವಾರ ಮೂರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಾಲಕೃಷ್ಣನ್ ಚೆಮ್ಮಂಚೇರಿ (ಸ್ವತಂತ್ರ),ಎನ್.ಬಾಲಕೃಷ್ಣನ್ (ಸ್ವತಂತ್ರ) ಮತ್ತು ಕೆ.ಆರ್.ರಾಜೇಶ್ವರಿ (ಸ್ವತಂತ್ರ) ನಾಮಪತ್ರ ಸಲ್ಲಿಸಿದ್ವರು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ(ಆರ್‍ಆರ್) ಪಿ.ಶಾಜು ಅವರಿಗೆ ನಾಮಪತ್ರ ಸಲ್ಲಿಸಿದರು. ಸಲ್ಲಿಕೆಯಾಗಿರುವ ಒಟ್ಟು 13ನಾಮಪತ್ರಗಳಲ್ಲಿ ಎಂಟು ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.
ಅಶ್ವಿನಿ ಎಂಎಲ್ (ಭಾರತೀಯ ಜನತಾ ಪಾರ್ಟಿ), ಎ. ವೇಲಾಯುಧನ್ (ಭಾರತೀಯ ಜನತಾ ಪಾರ್ಟಿ), ರಾಜಮೋಹನ್ ಉಣ್ಣಿತ್ತಾನ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಎಂ. ಸುಕುಮಾರಿ (ಬಹುಜನ ಸಮಾಜ ಪಕ್ಷ) ಮತ್ತು ಕೇಶವ್ ನಾಯ್ಕ್ (ಸ್ವತಂತ್ರ)ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.