HEALTH TIPS

ಏ. 13ರಿಂದ ಮಧೂರು ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ

                  ಮಧೂರು: ಕುಂಬಳೆ ಸೀಮೆಯ ಅತಿ ಪುರಾತನ ಹಾಗೂ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ. 13ರಿಂದ 17ರ ವರೆಗೆ ಜರುಗಲಿದೆ.

               13ರಂದು ಬೆಳಗ್ಗೆ 5.30ಕ್ಕೆ ವೇದ ಪಾರಾಯಣ, 9ಕ್ಕೆ ಧ್ವಜಾರೋಹಣ, ಸಹಸ್ರ ಕುಂಭಾಭಿಷೇಕ, ತುಲಾಭಾರ ಸೇವೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ಉತ್ಸವ ಬಲಿ ನಡೆಯುವುದು. 14ರಂದು ಬೆಳಗ್ಗೆ 5ಕ್ಕೆ ದೀಪೋತ್ಸವ, ವಿಷು ಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30ಕ್ಕೆ ಪಂಚವಾದ್ಯ, ತುಲಾಭಾರ ಸೇವೆ, ರಾತ್ರಿ 8ಕ್ಕೆ ಉತ್ಸವಬಲಿ ನಡೆಯುವುದು. 15ರಂದು ಬೆಳಗ್ಗೆ 5ಕ್ಕೆ ದೀಪೋತ್ಸವ, ತುಲಾಭಾರ ಸೇವೆ, ರಾತ್ರಿ 8ಕ್ಕೆ ನಡುದೀಪೋತ್ಸವ, ಉತ್ಸವಬಲಿ, ಸೇವೆ ಸುತ್ತುಗಳು ನಡೆಯುವುದು.

               16ರಂದು ಬೆಳಗ್ಗೆ 5ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನಬಲಿ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, 7ಕ್ಕೆ ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಬಲಿ ಘೋಷಯಾತ್ರೆ, ತಾಲೀಮು ಪ್ರದರ್ಶನ, ರಾತ್ರಿ 8.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, 10ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ ನಡೆಯುವುದು.

              17ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆ,ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 10ಕ್ಕೆ ವಿಶೇಷ ವಿದ್ಯುದ್ದೀಪಾಲಂಕೃತ ಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ,ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries