ಕಾಸರಗೋಡು: ಭಾರತದ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾದ ಮಡವೂರ್ ಸಿ ಎಂ ವಲಿಯುಲ್ಲಾಹಿ ಅವರ 34 ನೇ ಉರುಸ್ ಮುಬಾರಕ್ ಏ. 13 ರಿಂದ 17 ರ ವರೆಗೆ ಜರುಗಲಿದೆ. 4 ರಂದು ಬೆಳಗ್ಗೆ 9.30 ಕ್ಕೆ ಸಮಸ್ತ ಕೇರಳ ಜಮೀಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಮಖಾಂ ಝಿಯಾರತ್‍ಗೆ ನೇತೃತ್ವ ವಹಿಸಲಿದ್ದಾರೆ. ಸೈಯದ್ ಎನ್.ಪಿ.ಎಂ. ಜೈನುಲ್ ಆಬಿದೀನ್ ತಙಲ್ ಅಲ್ ಬುಖಾರಿ ಕಾಸರಗೋಡು (ಅಧ್ಯಕ್ಷ ಸಿ.ಎಂ. ಮಕಾಂ ಶರೀಫ್) ಧ್ವಜಾರೋಹಣದೊಂದಿಗೆ ಉರುಸ್‍ಗೆ ಚಾಲನೆ ನೀಡುವರು. ಎಪ್ರಿಲ್ 13ರ ಶನಿವಾರ ಸಂಜೆ 7.30ಕ್ಕೆ ಸಿಎಂ ಸಂಸ್ಮರಣಾ ಸಮಾವೇಶವನ್ನು ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ಉದ್ಘಾಟಿಸುವರು. ಓಣಂಬಿಳ್ಳಿ ಮುಹಮ್ಮದ್ ಫೈಝಿ ಮುಖ್ಯ ಭಾಷಣ ಮಾಡುವರು.
ಏಪ್ರಿಲ್ 14ರಂದು ಸಂಜೆ 7ಕ್ಕೆ ಸಿ.ಎಂ ಮಖಾಂ ಜಾಮಿಯಾ ಅಶ್'ಅರಿಯ ಸನಾತನ ಸಮ್ಮೇಳನವನ್ನು ಪಾಣಕ್ಕಾಡ್ ಸೈಯದ್ ಸಾದಿಖಲಿ ಶಿಹಾಬ್ ತಙಳ್ ಉದ್ಘಾಟಿಸುವರು. ಜಾಮಿಯಾ ಅಶ್'ಅರಿಯ್ಯ ಪ್ರಾಂಶುಪಾಲ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಬಹಾವುದ್ದೀನ್‍ಮುಹಮ್ಮದ್ ನದ್ವಿ ಪದವಿಪ್ರದಾನ ಸಮಾರಂಭ ನೆರವೇರಿಸುವರು.
15ರಂದು ಸಂಜೆ 7ಕ್ಕೆ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಭೆಯಲ್ಲಿ ಸೈಯದ್ ನಾಸರ್ ಹಯ್ಯಿ ಶಿಹಾಬ್ ತಙಳ್ ನೇತೃತ್ವ ವಹಿಸುವರು. ವಿವಿಧ ಧಾರ್ಮಿಕ ಮುಖಂಡರಿಂದ ಪ್ರವಚನ ನಡೆಯುವುದು. ಎಪ್ರಿಲ್ 16ರಂದು ಸಂಜೆ 7ಕ್ಕೆ ಹಾಸನ ಸಖಾಫಿ ಪೂಕೋಟೂರು, ಸೈಯದ್ ಮುಹಮ್ಮದ್ ಕೋಯ ತಂಗಳ್ ಜಮಲುಲ್ಲೈಲಿ (ಕೋಯಿಕೋಡ್ ಖಾಸಿ), ಪೆÇ್ರ.ಕೆ.ಆಲಿಕುಟ್ಟಿ ಮುಸ್ಲಿಯಾರ್ (ಪ್ರಧಾನ ಕಾರ್ಯದರ್ಶಿ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ) ಹಾಸನ ಸಖಾಫಿ ಪೂಕೋಟೂರು ಉದ್ಘಾಟಿಸುವರು. ಅಧ್ಯಕ್ಷ ಸೈಯದ್ ಎನ್. ಝೈನುಲ್ ಆಬಿದೀನ್ ತಂಗಳ್ ಅಲ್‍ಬುಖಾರಿ ಕಾಸರಗೋಡು, ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ಬೆಳ್ತಂಗಡಿ, ಸೈಯದ್ ಎಂ.ಎಸ್.ಮದನಿ ತಙಳ್ ವಳಮುಂಡ, ಸೈಯದ್ ಹಾದಿ ತಙಳ್ ಮೊಗ್ರಾಲ್, ಸೈಯದ್ ಹುಸೈನ್ ಬಾಅಲವಿ ತಙಳ್ ಕುಕ್ಕಾಜೆ, ಸೈಯದ್ ಎನ್.ಪಿ.ಎಂ ಶರಫುದ್ದೀನ್ ತಙಳ್ ಕಳತ್ತೂರು, ಶೈಖುನಾ ಉಮರ್ ಮುಸ್ಲಿಯಾರ್ ಕೋಯೋಟ್, ಯು.ಎಂ. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಯು.ಎಂ.ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಕೀಜೂರು- ಮಂಗಳೂರು ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕಾಸರಗೋಡು ಮಾಲಿಕ್ ದಿನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಬಾಖವಿ ಪಾಲ್ಗೊಳ್ಳುವರು.
ಏಪ್ರಿಲ್ 17ರಂದು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ತುಪ್ಪದ ಅನ್ನ ಸಮರ್ಪಣೆಯೊಂದಿಗೆ ಉರುಸ್ ಸಂಪನ್ನಗೊಳ್ಳುವುದು.