ತಿರುವನಂತಪುರಂ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಜಿಯೋಪ್ಲಾಸ್ಟಿ ಮಾಡಲು ಅಗತ್ಯವಿರುವ ಸ್ಟೆಂಟ್ ಮತ್ತು ಪರಿಕರಗಳನ್ನು ಒದಗಿಸುವ ಏಜೆನ್ಸಿಗಳಿಗೆ 143 ಕೋಟಿ ರೂ.ನೀಡಲು ಸರ್ಕಾರದಿಂದ ಬಾಕಿಯಿದೆ ಎಂಬ ಅಂಕಿಅಂಶ ಹೊರಬಿದ್ದಿದೆ.
ವೈದ್ಯಕೀಯ ಇಂಪ್ಲಾಂಟ್ಸ್ ಮತ್ತು ಡಿಸ್ಪೋಸಬಲ್ಸ್ ವಿತರಕರು ತಕ್ಷಣವೇ ಬಾಕಿ ಪಾವತಿಸದಿದ್ದರೆ, ಸಾಧನಗಳ ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಹಿಂದೆ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆಗೆ ಪತ್ರಗಳನ್ನು ಕಳುಹಿಸಲಾಗಿತ್ತು, ಆದರೆ ಸರ್ಕಾರವು ಚರ್ಚೆಗೆ ಕರೆಯಲು ಸಿದ್ಧವಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು. ಒದಗಿಸಿದ ಶಸ್ತ್ರಚಿಕಿತ್ಸಾ ಉಪಕರಣಗಳಿಗೆ ಸಂಬಂಧಿಸಿದಂತೆ 10 ವರ್ಷಗಳ ವಿವಿಧ ಬಾಕಿಗಳಿವೆ. ಆದರೆ ಕಳೆದ ಎರಡು ವರ್ಷಗಳಿಂದ ಬಾಕಿಯಿರುವ ಕನಿಷ್ಠ 143 ಕೋಟಿಯನ್ನಾದರೂ ಕೂಡಲೇ ಪಾವತಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಮಧ್ಯೆ, ಬಾಕಿ ಪಾವತಿಸುವುದನ್ನು ತಪ್ಪಿಸಲು ಸರ್ಕಾರವು ಏಜೆನ್ಸಿಗಳನ್ನು ಬೈಪಾಸ್ ಮಾಡಲು ಮತ್ತು ನೇರವಾಗಿ ಉಪಕರಣಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. ಆದರೆ ಕಂಪನಿಗಳು ನೇರವಾಗಿ ಉಪಕರಣಗಳನ್ನು ನೀಡುವುದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಾಗ ಆ ತಂತ್ರವು ಕಮರಿದೆ ಎನ್ನಲಾಗಿದೆ.
ಸದ್ಯ ಕೆಲಕಾಲ ಸ್ಟಾಂಡ್ ಸ್ಟಾಕ್ ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಆಸ್ಪತ್ರೆಗಳು ಆಂಜಿಯೋಪ್ಲಾಸ್ಟಿ ಮಾಡಲಾಗದ ಬಿಕ್ಕಟ್ಟು ಎದುರಿಸುವ ಸೂಚನೆ ಇದೆ. ಇದು ಬಡವರ ಮೇಲೆ ಪರಿಣಾಮ ಬೀರುತ್ತದೆ.