ಜಿನೀವಾ: ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಗಾಜಾಪಟ್ಟಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷಗಳಷ್ಟು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
ಜಿನೀವಾ: ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಗಾಜಾಪಟ್ಟಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷಗಳಷ್ಟು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
'ಯುದ್ಧದಿಂದಾಗಿ ಅಂದಾಜು 3.70 ಕೋಟಿ ಟನ್ ತ್ಯಾಜ್ಯ ಸಂಗ್ರಹವಾಗಿದೆ.
'100 ಟ್ರಕ್‌ಗಳನ್ನು ಬಳಸಿದರೂ ಗಾಜಾ ಪಟ್ಟಿಯಲ್ಲಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷ ಬೇಕಾಗಬಹುದು' ಎಂದು ತಿಳಿಸಿದ್ದಾರೆ.
ಗಾಜಾದ ಆರೋಗ್ಯ ಇಲಾಖೆಯ ಪ್ರಕಾರ, ಇಸ್ರೇಲ್ ದಾಳಿಯಿಂದಾಗಿ ಈವರೆಗೆ 34,305 ಪ್ಯಾಲೇಸ್ಟಿಯನ್ನರು ಮೃತಪಟ್ಟಿದ್ದು, 77,293 ಮಂದಿ ಗಾಯಗೊಂಡಿದ್ದಾರೆ. 23 ಲಕ್ಷ ಜನ ನಿರಾಶ್ರಿತರಾಗಿದ್ದಾರೆ.