ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚೇಡಿಕಾನ ನಿವಾಸಿ ಮಹಮ್ಮದ್ ಶಾಫಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 15ಪವನು ಚಿನ್ನಾಭರಣ ದೋಚಿದ್ದಾರೆ. ಮನೆಯ ಅಡುಗೆ ಕೊಠಡಿ ಬಾಗಿಲು ಒಡೆದು ನುಗ್ಗಿದ ಕಳ್ಳರು ಕೃತ್ಯವೆಸಗಿದ್ದಾರೆ. ಮಹಮ್ಮದ್ ಶಾಫಿ ಕುಟುಂಬ ಮಂಗಳವಾರ ಸಂಬಂಧಿಕರ ಮನೆಗೆ ತೆರಳಿದ್ದು, ಬುಧವಾರ ಬೆಳಗ್ಗೆ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ.
ಸನಿಹದ ಇನ್ನೆರಡು ಮನೆಗಳಿಗೂ ಕಳ್ಳರು ನುಗ್ಗಿದ್ದು, ಕಳವಾದ ವಸ್ತುಗಳ ಬಗ್ಗೆ ಮಾಹಿತಿ ಲಭಿಸಿಲ್ಲ. ಮನೆಯವರು ಮನೆಗೆ ಬೀಗಹಾಕಿ ವಿದೇಶಕ್ಕೆ ತೆರಳಿದ್ದರು. ಮಹಮ್ಮದ್ ಶಾಫಿ ಅವರ ದಉರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.