HEALTH TIPS

ಮೇ 15ಕ್ಕೆ ಸಿಂಗಪುರ ಪ್ರಧಾನಿ ಲೀ ರಾಜೀನಾಮೆ

              ಸಿಂಗಪುರ: ಸಿಂಗಪುರ ಪ್ರಧಾನಿಯಾಗಿ ಸುಮಾರು 20 ವರ್ಷ ಆಡಳಿತ ನಡೆಸಿರುವ ಲೀ ಸಿಯೆನ್‌ ಲೂಂಗ್‌ ಅವರು ಮೇ 15ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಹಾಲಿ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಮುಂದಿನ ಪ್ರಧಾನಿಯಾಗಿ ಪದೋನ್ನತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ.

              2004ರ ಆಗಸ್ಟ್ 4ರಂದು ಸಿಂಗಪುರದ ಮೂರನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಲೀ ಅವರು, ನಾಯಕತ್ವ ಬದಲಾವಣೆಯು ಯಾವುದೇ ದೇಶಕ್ಕೆ ಮಹತ್ವದ ಗಳಿಗೆಯಾಗಿದೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

              'ಈ ವರ್ಷ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಳೆದ ವರ್ಷದ ನವೆಂಬರ್‌ನಲ್ಲೇ ಘೋಷಣೆ ಮಾಡಿದ್ದೇನೆ. ಈ ಪ್ರಕಾರ 2024ರ ಮೇ 15ರಂದು ಪ್ರಧಾನಿ ಸ್ಥಾನ ತ್ಯಜಿಸಲಿದ್ದೇನೆ. ಅದೇ ದಿನ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ' ಎಂದು ಲೀ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries