ನವದೆಹಲಿ: ಕೆಲಸಕ್ಕೆಂದು ದಕ್ಷಿಣ ಏಷ್ಯಾ ರಾಷ್ಟ್ರ ಲಾವೋಸ್‌ಗೆ ಹೋಗಿ ತೊಂದರೆಗೆ ಸಿಲುಕಿದ್ದ 17 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.
ನವದೆಹಲಿ: ಕೆಲಸಕ್ಕೆಂದು ದಕ್ಷಿಣ ಏಷ್ಯಾ ರಾಷ್ಟ್ರ ಲಾವೋಸ್‌ಗೆ ಹೋಗಿ ತೊಂದರೆಗೆ ಸಿಲುಕಿದ್ದ 17 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.
ಈ ಕುರಿತ ಮಾಹಿತಿಯನ್ನು ಅವರು ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಲಾವೋಸ್‌ನಲ್ಲಿ ಕೆಲಸಕ್ಕೆಂದು ಹೋಗಿ ಸುರಕ್ಷಿತವಲ್ಲದ ಕೆಲಸಗಳಲ್ಲಿ ಹಾಗೂ ಕಾನೂನುಬಾಹಿರ ಕೆಲಸಕ್ಕೆ ಪ್ರೇರಿಪಿಸುವವರ ಜಾಲಕ್ಕೆ ಸಿಲುಕಿದ್ದ 17 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಇದು ಲಾವೋಸ್‌ನಲ್ಲಿನ ನಮ್ಮ ರಾಯಭಾರ ಕಚೇರಿ ಅಧಿಕಾರಿಗಳ ಪರಿಶ್ರಮಕ್ಕೆ ಹಿಡಿದ ಕನ್ನಡಿ ಎಂದು ಅವರು ಹೇಳಿದ್ದಾರೆ.
ನಾವು ಭಾರತದ ಹೊರಗಿನವರ ನಮ್ಮವರ ಜೊತೆ ಇದ್ದೇವೆ ಎಂದು ತೋರಿಸುವ ಮೋದಿ ಗ್ಯಾರಂಟಿ ಇದು ಎಂದು ಜೈಶಂಕರ್ ಮೆಚ್ಚಿಕೊಂಡಿದ್ದಾರೆ.