HEALTH TIPS

ಏ.17 ರಾಮ ನವಮಿ: ಅಯೋಧ್ಯೆಯಲ್ಲಿ 'ರಾಮ್ ಲಲ್ಲಾ' ಪ್ರತಿಷ್ಠಾಪನೆ ನಂತರ ಮೊದಲ ಉತ್ಸವ, ಸೂರ್ಯ ಅಭಿಷೇಕಕ್ಕೆ ಸಿದ್ಧತೆ

            ಲಕ್ನೋ: ಈ ಬಾರಿಯ ರಾಮ ನವಮಿ ಆಚರಣೆ ಅಯೋಧ್ಯೆ ರಾಮಮಂದಿರದಲ್ಲಿ ಜೋರಾಗಿದೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾನಲ್ಲಿ ನಾಳೆ ಏಪ್ರಿಲ್ 17ರಂದು 'ಸೂರ್ಯ ಅಭಿಷೇಕ'ಕ್ಕೆ ಸಿದ್ಧತೆ ನಡೆಯುತ್ತಿದೆ.

            ಐತಿಹಾಸಿಕ ಕಾರ್ಯಕ್ರಮಕ್ಕೆ ಅಗತ್ಯವಾದ ಸಂಪೂರ್ಣ ಆಪ್ಟೋ ಮೆಕಾನಿಕಲ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬೆಳಗಿನ ಸೂರ್ಯ ಕಿರಣ ಆಗಮನ ಸಂದರ್ಭದಲ್ಲಿಯೇ ಸೂರ್ಯ ಅಭಿಷೇಕ ನೆರವೇರಲಿದೆ.

            ಪುಟ್ಟ 5 ವರ್ಷದ ಬಾಲ ರಾಮ್ ಲಲ್ಲಾನ ಜನ್ಮದಿನ ರಾಮ ನವಮಿಯಂದು 51 ಇಂಚು ಎತ್ತರದ ವಿಗ್ರಹದ ಹಣೆಯ ಮೇಲೆ ಐದು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12:16 ಕ್ಕೆ ಬೀಳುತ್ತದೆ ಎಂದು ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಸೋಮವಾರ ಹೇಳಿದ್ದಾರೆ.

             "ಸಮಾರಂಭಕ್ಕೆ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಆ ದೈವಿಕ ಕ್ಷಣಗಳನ್ನು ಅದ್ಧೂರಿಯಾಗಿ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ ಎಂದರು.

           ಹಿಂದೂ ಪಂಚಾಗದ ಮೊದಲ ತಿಂಗಳ ಒಂಬತ್ತನೇ ದಿನದಂದು ಆಚರಿಸಲಾಗುವ ರಾಮ ನವಮಿಯು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್‌ ತಿಂಗಳಲ್ಲಿ ಬರುತ್ತದೆ, ಇದು ಭಗವಾನ್ ರಾಮನ ಜನ್ಮವನ್ನು ಸೂಚಿಸುತ್ತದೆ. ಜನವರಿ 22, 2024 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪಿಸಿದ ನಂತರ ಭಗವಾನ್ ರಾಮನ ಜನ್ಮವನ್ನು ಗುರುತಿಸುವ ಮೊದಲ ರಾಮನವಮಿ ಇದು.

             ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (CBRI) ಯೋಜನೆಯ ಮುಖ್ಯ ವಿಜ್ಞಾನಿ ಎಸ್ ಕೆ ಪಾಣಿಗ್ರಾಹಿ, ಒಂದು ವರ್ಷದ ಪ್ರಯತ್ನದ ನಂತರ, ರಾಮನವಮಿಯಂದು ಭಗವಾನ್ ರಾಮನ ಹಣೆಯ ಮೇಲೆ ಸೂರ್ಯಕಿರಣಗಳು ಬೀಳುವಂತೆ ಮಾಡಲು ಸಾಧ್ಯವಾಗಿದೆ. ತಜ್ಞರ ತಂಡವು ಏಪ್ರಿಲ್ 2023 ರಲ್ಲಿ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಿತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR), ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI), ರೂರ್ಕಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ಬೆಂಗಳೂರು, ವಿಜ್ಞಾನಿಗಳು ಅದನ್ನು ಯಶಸ್ವಿಯಾಗಿ ರೂಪಿಸಿದರು ಎಂದರು.

               ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಲಗಳ ಪ್ರಕಾರ, ಸೂರ್ಯನ ಬೆಳಕು ರಾಮ್ ಲಲ್ಲಾನ ಹಣೆಯನ್ನು ವೃತ್ತಾಕಾರದ 'ತಿಲಕ'ದಿಂದ ಅಲಂಕರಿಸುತ್ತದೆ, ಸುಮಾರು 75 ಮಿಮೀ ಅಳತೆ, ಸೂರ್ಯವಂಶಿ ರಾಜನ 'ಸೂರ್ಯ ತಿಲಕ'ವನ್ನು ಸಂಕೇತಿಸುತ್ತದೆ.

ವೃತ್ತಾಕಾರ 'ತಿಲಕ'

               ಸೂರ್ಯವಂಶಿ ರಾಜನ 'ಸೂರ್ಯ ತಿಲಕ'ವನ್ನು ಸಂಕೇತಿಸುವ ಸುಮಾರು 75 ಮಿಮೀ ಅಳತೆಯ ವೃತ್ತಾಕಾರದ 'ತಿಲಕ'ದಿಂದ ಸೂರ್ಯನ ಬೆಳಕು ರಾಮ ಲಲ್ಲಾನ ಹಣೆಯ ಮೇಲೆ ಬೀಳುತ್ತದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries