HEALTH TIPS

17ನೇ ಲೋಕಸಭೆಯಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿದ ಸಂಸದರ ಸಂಖ್ಯೆಯೇ ಹೆಚ್ಚು: ಸುಪ್ರೀಂ ಕೋರ್ಟ್‌ ಅಮಿಕಸ್‌ ಕ್ಯುರೇ ವರದಿ

             ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳು ಯಾವುದೇ ಪ್ರಕರಣಗಳನ್ನು ಎದುರಿಸದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸಿದ್ದರೆಂದು ಸುಪ್ರೀಂ ಕೋರ್ಟಿನ ಅಮಿಕಸ್‌ ಕ್ಯುರೇ ವರದಿ ಹೇಳಿದೆ.

             "ಮತದಾರರು ತಮ್ಮ ಜನಪ್ರತಿನಿಧಿಗಳ ಕ್ರಿಮಿನಲ್‌ ಹಿನ್ನೆಲೆಗಳ ಬಗ್ಗೆ ತಿಳಿಯುವ ಹಕ್ಕುಗಳನ್ನು ಹೊಂದಿದ್ದಾರೆ.

              ಅವರ ವಿರುದ್ಧದ ವಿಚಾರಣೆ ಹಾಗೂ ವಿಚಾರಣೆಗಳಿಗುಂಟಾಗುವ ವಿಳಂಬಗಳಿಗೆ ಕಾರಣಗಳನ್ನು ತಿಳಿಯುವ ಹಕ್ಕುಗಳೂ ಮತದಾರರಿಗಿದೆ," ಎಂದು ಸುಪ್ರೀಂ ಕೋರ್ಟಿನ ಅಮಿಕಸ್‌ ಕ್ಯುರೇ ಆಗಿರುವ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ತಮ್ಮ ವರದಿಯಲ್ಲಿ ಹೇಳಿದ್ದಾರೆ.

                  ಶಾಸಕರುಗಳ ಕುರಿತಾದ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಸ್ತೃತ ವಿವರಗಳಿರುವ ರಾಜ್ಯ ಹೈಕೋರ್ಟ್‌ಗಳ ವೆಬ್‌ಸೈಟ್‌ಗಳ ಮುಖಪುಟಗಳ ಕುರಿತಾದ ಪ್ರತ್ಯೇಕ ಟ್ಯಾಗ್‌ ಇರಬೇಕು, ಪ್ರತಿ ಪ್ರಕರಣದ ವಿಚಾರಣೆಯ ಪ್ರಗತಿಯ ಬಗ್ಗೆ ವಿವರಗಳೂ ಇರಬೇಕು, ಇದು ಜನಸಾಮಾನ್ಯರಿಗೆ ಅವರ ಅಭ್ಯರ್ಥಿಗಳ ಕುರಿತಾದ ಪ್ರಕರಣಗಳ ಬಗ್ಗೆ ಮಾಹಿತಿ ದೊರೆಯುತ್ತದೆ," ಎಂದು ವರದಿ ಹೇಳಿದೆ.

                ವಕೀಲೆ ಸ್ನೇಹ ಕಲಿಟಾ ಅವರ ಸಹಕಾರದೊಂದಿಗೆ ತಯಾರಿಸಲಾಗಿರುವ ವರದಿಯಲ್ಲಿ ಲೋಕಸಭಾ ಚುನಾವಣೆ 2024ರ ಅಭ್ಯರ್ಥಿಗಳ ಕುರಿತಾದ ಎಡಿಆರ್‌ ಕಲೆಹಾಕಿದ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಒಟ್ಟು 2,810 ಅಭ್ಯರ್ಥಿಗಳ ಪೈಕಿ 510 ಮಂದಿ , ಅಂದರೆ ಶೇ 18ರಷ್ಟು ಮಂದಿಯ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ, ಇವರ ಪೈಕಿ 327 ಮಂದಿ (ಶೇ 12) ಗಂಭೀರ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಈ ಪ್ರಕರಣಗಳಲ್ಲಿ ಶಿಕ್ಷೆಯಾದರೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ಆಗಬಹುದಾಗಿದೆ ಎಂದು ವರದಿ ಹೇಳಿದೆ.

2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7,928 ಅಭ್ಯರ್ಥಿಗಳ ಪೈಕಿ 1500 (ಶೇ19) ಮಂದಿ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದರು. ಅವರಲ್ಲಿ 1,070 ಮಂದಿ (ಶೇ 13) ಗಂಭಿರ ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿದ್ದರು" ಎಂದೂ ವರದಿ ಹೇಳಿದೆ.

                 17ನೇ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್‌ ಕೇಸ್‌ ಹೊಂದಿದ 514 ಅಭ್ಯರ್ಥಿಗಳ ಪೈಕಿ 225 ಮಂದಿ (ಶೇ 44) ವಿಜೇತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries