ಕುಂಬಳೆ: ಉತ್ತರ ಕೇರಳದ ಅತಿ ಪುರಾತನವೂ, ಇತಿಹಾಸ ಪ್ರಸಿದ್ದವೂ ಆದ ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯದ್ ಶಹೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ನ ವಾರ್ಷಿಕ ಹರಕೆ ಉತ್ಸವ ಏಪ್ರಿಲ್ 18 ರಿಂದ 21 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜಮಾಅತ್ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ಸೋಮವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.18 ರಂದು ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ ನಡೆಯಲಿದೆ. ರಾತ್ರಿ ಸಾವಿರ ಜಮಾಅತ್ ಅಧ್ಯಕ್ಷ ಸಯ್ಯದ್ ಯುಕೆ ಸೈಫುಲ್ಲಾ ಬುಖಾರಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸೈಯದ್ ಝೈನುಲ್ ಅಬಿದೀನ್‍ಜಿಫ್ರಿ ಅವರು ಉದ್ಘಾಟಿಸುವರು. ಕಿಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣ ಮಾಡಲಿದ್ದು, ಖ್ಯಾತ ವಾಗ್ಮಿ ಮುಹಮ್ಮದ್ ಅಝ್ಹರಿ ಅವರು ಭಾಷಣ ಮಾಡಲಿರುವರು. ಮುಹಿಯುದ್ದೀನ್ ಹುದವಿ ಆಲುವಾ, ಕೂಟ್ಟಂಬಾರ ಅಬ್ದುಲ್ ರಹಮಾನ್ ದಾರಿಮಿ, ಮೊದಲಾದವರು ವಿವಿಧ ದಿನಗಳಲ್ಲಿ ಉಪನ್ಯಾಸ ನಡೆಯಲಿದೆ. ಸಮಾರೋಪ ಸಮಾರಂಭವನ್ನು ಅಸ್ಸಯ್ಯದ್ ಶಹೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಅಸ್ಸಯ್ಯದ್ ಪೂಕುಂಞÂ್ಞ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಅಧ್ಯಕ್ಷರು ಹಾಗೂ ಉದ್ಯಾಪರ ಸಾವಿರ ಜಮಾಅತ್ ಜಂಟಿ ಖಾಝಿ ಸೈಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಅಸ್ಸಯ್ಯದ್ ಹಮೀದುಲ್ ಮಿಸ್ಬಾಹಿ ಹಾದಿ ತಂಙಳ್, ಸೈಯದ್ ನೂರಿಶಾ ತಂಙಳ್, ಬಿಎನ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ ಕರೀಂ ದಾರಿಮಿ ಮೊದಲಾದವರು, ಅನೇಕ ಸಾದಾತ್‍ಗಳು, ಉಲಮಾಗಳು ಮತ್ತು ಉಮರ್‍ಗಳು, ಪ್ರಮುಖ ರಾಜಕೀಯ, ಸಾಂಸ್ಕøತಿಕ ನಾಯಕರು ಭಾಗವಹಿಸಿ ಮಾತನಾಡುವರು. ಈ ಸಂದರ್ಭ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ. ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಅಸ್ಸೈಯದ್ ಪೂಕ್ಕುಂಞÂ್ಞ ತಂಙಳ್, ಇಬ್ರಾಹಿಂ ಬಟರ್‍ಫ್ಲೈ, ಸಾವಿರ ಜಮಾತ್‍ನ ಪ್ರಧಾನ ಕಾರ್ಯದರ್ಶಿ ದರ್ಗಾ ಶರೀಫ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಳ್ಳಿಕುಂಞÂ್ಞ ಹಾಜಿ, ಜಮಾಅತ್ ಕೋಶಾಧಿಕಾರಿ ಅಹ್ಮದ್ ಬಾವ ಹಾಜಿ, ದರ್ಗಾ ಶರೀಫ್ ಸಮಿತಿ ಕೋಶಾಧಿಕಾರಿ ಆಲಿಕುಟ್ಟಿ ನ್ಯಾಷನಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.