ಕೊಚ್ಚಿ: ಮಲಬಾರ್ 'ಪೊರೋಟಾ'ಕ್ಕೆ ಶೇ.18ರಷ್ಟು ಜಿಎಸ್‍ಟಿ ವಿಧಿಸಬಾರದು ಎಂದು ಕೇರಳ ಹೈಕೋರ್ಟ್ ಸೂಚಿಸಿದೆ. ಜಿಎಸ್‍ಟಿಯನ್ನು ಶೇ.5ರ ದರದಲ್ಲಿ ಮಾತ್ರ ವಿಧಿಸಬೇಕು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಸಲಹೆ ನೀಡಿದ್ದಾರೆ.
ಗೋಧಿ ಪೊರೋಟಾದ ಮೇಲೆ ಅದೇ ದರದಲ್ಲಿ ಮಾತ್ರ ತೆರಿಗೆ ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಸಂಬಂಧ ಕೊಚ್ಚಿ ಮೂಲದ ಮಾಡರ್ನ್ ಪುಡ್ ಎಂಟರ್ ಪ್ರೈಸ್ ಅರ್ಜಿ ಸಲ್ಲಿಸಿತ್ತು. ಸ್ಟೇಟ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಮತ್ತು ಮೇಲ್ಮನವಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಎಆರ್) ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ.
ದರ ಅಧಿಸೂಚನೆಯ ಪ್ರಕಾರ, ಪಿಜ್ಜಾ, ಬ್ರೆಡ್, ಖಕ್ರಾ, ಸಾದಾ ಚಪಾತಿ ಅಥವಾ ರೊಟ್ಟಿ 5 ಪ್ರತಿಶತ ಜಿಎಸ್‍ಟಿಗೆ ಒಳಪಟ್ಟಿರುತ್ತದೆ ಅಥವಾ ಅವುಗಳಿಗೆ ವಿನಾಯಿತಿ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.