ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪ್ರಿಲಿಮಿನರಿ ಪರೀಕ್ಷೆಯ ಹಿನ್ನೆಲೆಯಲ್ಲಿ ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು(ಯುಜಿಸಿ-ಎನ್‌ಇಟಿ) ಜೂನ್ 18ಕ್ಕೆ ಮುಂದೂಡಲಾಗಿದೆ.
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪ್ರಿಲಿಮಿನರಿ ಪರೀಕ್ಷೆಯ ಹಿನ್ನೆಲೆಯಲ್ಲಿ ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು(ಯುಜಿಸಿ-ಎನ್‌ಇಟಿ) ಜೂನ್ 18ಕ್ಕೆ ಮುಂದೂಡಲಾಗಿದೆ.
'ವಿದ್ಯಾರ್ಥಿಗಳ ಅಭಿಪ್ರಾಯವನ್ನು ಪರಿಗಣಿಸಿ, ಜೂನ್ 16ರಂದು ನಿಗದಿಯಾಗಿದ್ದ ಯುಜಿಸಿ-ಎನ್‌ಇಟಿಯನ್ನು ಜೂನ್ 18ರಂದು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮತ್ತು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ನಿರ್ಧರಿಸಿದೆ' ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.