ಕಾಸರಗೋಡು: ಚಿತ್ತಾರಿ ಕುದ್ರು ಶ್ರೀ ಮೂಕಾಂಬಿಕಾ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.19 ರಿಂದ 27 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.19 ರಂದು ಬೆಳಗ್ಗೆ 6 ಕ್ಕೆ ಗಣಪತಿ ಹೋಮ, 7 ಕ್ಕೆ ಉಗ್ರಾಣ ಮುಹೂರ್ತ, ದೀಪ ಪ್ರಜ್ವಲನೆ, 7.15 ಕ್ಕೆ ಉಗ್ರಾಣ ತುಂಬಿಸುವುದು, 7.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, 8 ರಿಂದ ಭಜನಾ ಸೇವೆಗಳ ಆರಂಭ, ಮಧ್ಯಾಹ್ನ 12.30 ಕ್ಕೆ ಪಲ್ಲ ಪೂಜೆ, ಅನ್ನ ಸಂತರ್ಪಣೆ, ಎ.20 ರಂದು ಬೆಳಗ್ಗೆ 9 ಕ್ಕೆ ಮುಗುಳಿಯ ಮೆರವಣಿಗೆ, ಮಧ್ಯಾಹ್ನ 12.30 ರಿಂದ ಪಲ್ಲ ಪೂಜೆ, ಅನ್ನ ಸಂತರ್ಪಣೆ, ಸಂಜೆ 5 ರಿಂದ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸುದರ್ಶನ ಹೋಮ, ದುರ್ಗಾಪೂಜೆ, ಅವಾಹನಾ ಉಚ್ಛಾಟನಾ ಕ್ರಿಯೆಗಳು ನಡೆಯುವುದು.
ಎ.21 ರಂದು ಸಂಜೆ 5 ರಿಂದ ಆಚಾರ್ಯವರಣ, ಪಶುದಾನ ಪುಣ್ಯಾಹ, ಅಂಕುರಾರೋಪಣೆ, ಪ್ರಾಸಾದ ಶುದ್ಧಿ, ಅಸ್ತ್ರ ಕಲಶ, ರಾಕ್ಷೋಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ಅತ್ತಾಳ ಪೂಜೆ, ಕುಂಡ ಶುದ್ಧಿ, ಎ.26 ರಂದು ಬೆಳಗ್ಗೆ 6 ರಿಂದ 108 ತೆಂಗಿನ ಕಾಯಿಯ ಮಹಾಗಣಪತಿ ಹೋಮ, ಪುಣ್ಯಾಹ, ಪ್ರಾಸಾದ ಪ್ರತಿಷ್ಠೆ, ಅಧಿವಾಸೋದ್ಘಾಟನಾ ಪೂಜೆ, ಪೀಠ ಪ್ರತಿಷ್ಠೆ, 11.33 ರಿಂದ ಶ್ರೀ ಮೂಕಾಂಬಿಕಾ ದೇವಿ ಹಾಗು ಪರಿವಾರ ದೈವಗಳ ಪುನ:ಪ್ರತಿಷ್ಠೆ, ಮಧ್ಯಾಹ್ನ 12.30 ರಿಂದ ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ, 1.27 ರಿಂದ ಕರ್ಕರಿ ಪರಿಷೇಕ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಜೀವವಾಹನೆ, ಪರಿ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಶ್ರೀ ನಾಗದೇವರ ಪೂಜೆ, ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ, ನಿತ್ಯ ನೈಮಿತ್ತಿಕ ನಿಶ್ಚಯ, ಪ್ರತಿಷ್ಠಾ ದಕ್ಷಿಣೆ, ರಾತ್ರಿ 9.30 ರಿಂದ ಮಂತ್ರಮೂರ್ತಿಗಳ ರಾತ್ರಿ ಕೋಲ ನಡೆಯುವುದು.
ಎ.27 ರಂದು ಬೆಳಗ್ಗೆ 6 ರಿಂದ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12.30 ರಿಂದ ಶ್ರೀ ದೇವಿಯ ಮಹಾಪೂಜೆ, ದೇವಿ ದರ್ಶನ, ವಿಷ್ಣು ವೆಳಿಚ್ಚಪ್ಪಾಡ್ ಮತ್ತು ಮಂತ್ರ ಮೂರ್ತಿಗಳ ದೈವ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 12.30 ರಿಂದ ಪಲ್ಲ ಪೂಜೆ, ಮಹಾ ಅನ್ನ ಸಂತರ್ಪಣೆ, ಸಂಜೆ ಧ್ವಜಾವರೋಹಣ ನಡೆಯಲಿದೆ.