ನವದೆಹಲಿ: ಭಾರತದ ಜನಸಂಖ್ಯೆ ಅಂದಾಜು 144 ಕೋಟಿ ತಲುಪಿದ್ದು, ಇದರಲ್ಲಿ 14ಕ್ಕಿಂತ ಕಡಿಮೆ ವಯೋಮಾನ ದವರು ಶೇ.24 ಇದ್ದಾರೆಂದು ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಸ್ಥಿತಿಯ (ಯುಎನ್ಎಫ್ಪಿಎ) 2024ರ ವರದಿ ಬಹಿರಂಗಪಡಿಸಿದೆ. ಇನ್ನು ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ.

ಯುಎನ್ಎಫ್ಪಿಎದಲ್ಲಿನ ಲೈಂಗಿಕ ಹಾಗೂ ಸಂತಾನೋತ್ಪತ್ತಿಯ ಆರೋಗ್ಯ ಮತ್ತು ಹಕ್ಕುಗಳಲ್ಲಿನ ಅಸಮಾನತೆ ಕುರಿತ ವರದಿಯ ಪ್ರಕಾರ, ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಅಂದಾಜು 144.17 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ಚೀನಾದ ಜನಸಂಖ್ಯೆ (142.5ಕೋಟಿ ) ಹಿಂದಿಕ್ಕಿದೆ ಎಂದು ವರದಿ ತಿಳಿಸಿದೆ. 2011ರ ಜನಗಣತಿಯಲ್ಲಿ ಭಾರತದ ಜನಸಂಖ್ಯೆ 121 ಕೋಟಿ ದಾಖಲಾಗಿತ್ತು.
ದೇಶದ 144 ಕೋಟಿ ಜನರ ಪೈಕಿ 14 ವಯಸ್ಸಿನ ಒಳಗಿನವರು ಶೇ.24 ಇದ್ದು, 10ರಿಂದ 19 ವಯಸ್ಸಿ ನವರು ಶೇ.17 ಇದ್ದಾರೆ. 10-24 ವಯಸ್ಸಿನವರು ಶೇ.26 ಇದ್ದು, 15-64 ವಯೋಮಾನದವರು ಶೇ.68 ಇದ್ದಾರೆ. ಶೇ.7 ಜನರು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಪುರುಷರ ಜೀವಿತಾವಧಿ 71 ವರ್ಷ ಮತ್ತು ಮಹಿಳೆಯರ ಜೀವಿತಾವಧಿ 74 ವರ್ಷ ಎಂದು ವರದಿ ಅಂದಾಜಿಸಿದೆ.
ಭಾರತದಲ್ಲಿ 2006 ರಿಂದ 2023ರ ನಡುವೆ ಬಾಲ್ಯ ವಿವಾಹ ಶೇ.23 ದಾಖಲಾಗಿದೆ. ವಿಶ್ವದಾದ್ಯಂತ ಶೇ.8ಕ್ಕೆ ಹೋಲಿಸಿದರೆ ಭಾರತದಲ್ಲಿ ತಾಯಂದಿರ ಮರಣ ಗಣನೀಯವಾಗಿ ಕುಸಿದಿದೆ. ಆದಾಗ್ಯೂ ಮಕ್ಕಳಿಗೆ ಜನ್ಮ ನೀಡುವ ವೇಳೆ ತಾಯಿ ಮರಣಿಸುವ ಪ್ರಮಾಣ ಭಾರತದ 114 ಜಿಲ್ಲೆಗಳಲ್ಲಿ ಶೇ.210ಕ್ಕಿಂತ ಅಧಿಕವಾಗಿದ್ದು, ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.