ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಹಗೆತನ ಹೆಚ್ಚುತ್ತಿರುವ ನಂತರ ಪಶ್ಚಿಮ ಏಷ್ಯಾದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಈ ವಾರ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡಿದ್ದಾರೆ. ಈ ವರ್ಷ ಎರಡನೇ ಬಾರಿಗೆ ಸುಲ್ಲಿವಾನ್ ತನ್ನ ಭಾರತ ಪ್ರವಾಸವನ್ನು ಮುಂದೂಡಿದ್ದಾರೆ.
ಅಮೆರಿಕದ ಹಿರಿಯ ಅಧಿಕಾರಿ ಭಾರತದ ತಮ್ಮ ಸಹವರ್ತಿ ಅಜಿತ್ ದೋವಲ್ ಅವರೊಂದಿಗೆ ನಿರ್ಣಾಯಕ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನ ಬಗ್ಗೆ ಅಮೆರಿಕ- ಭಾರತ ಯೋಜನೆ ಅನುಷ್ಠಾನದಲ್ಲಿನ ಪ್ರಗತಿ ಸೇರಿದಂತೆ ಮತ್ತಿತರ ವಿಚಾರಗಳಲ್ಲಿ ವ್ಯಾಪಕ ಮಾತುಕತೆ ನಡೆಸಲು ನಿರ್ಧರಿಸಿದ್ದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಅಮೆರಿಕ ರಾಷ್ಟ್ರೀಯ ಭದ್ರತೆ ಸಲಹೆಗಾರ ಸುಲ್ಲಿವಾನ್ ಈ ವಾರ ಭಾರತಕ್ಕೆ ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ" ಎಂದು ಯುಎಸ್ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ಇರಾನ್ ನೂರಾರು ಡ್ರೋನ್ ಮತ್ತು ಕ್ಷಿಪಣಿ ಹಾರಿಸುವುದರೊಂದಿಗೆ ಇಸ್ರೇಲ್ ಮೇಲೆ ಮೊದಲ ನೇರ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ನಿಗ್ನತೆ ಹೆಚ್ಚಾಗಿದೆ.
ಮುಂದೊಂದು ದಿನ iCET ವಾರ್ಷಿಕ ಪರಾಮರ್ಶೆಗೆ ಯುಎಸ್ ರಾಷ್ಟ್ರೀಯ ಭದ್ರತೆಗಾರರು ಎದುರು ನೋಡುತ್ತಿದ್ದಾರೆ. ಭಾರತದೊಂದಿಗಿನ ಆಳವಾದ ಮತ್ತು ಬಹುಮುಖಿ ಪಾಲುದಾರಿಕೆಯನ್ನು ಮುಂದುವರಿಸಲು ವೈಯಕ್ತಿಕವಾಗಿ ಬದ್ಧವಾಗಿರುವುದಾಗಿ ವಕ್ತಾರರು ಹೇಳಿದ್ದಾರೆ.