ತಿರುವನಂತಪುರ: ಇಂದಿನಿಂದ ಎಸ್ ಎಸ್ ಎಲ್ ಸಿ, ಹೈಯರ್ ಸೆಕೆಂಡರಿ ಮೌಲ್ಯಮಾಪನ ಆರಂಭಗೊಂಡಿದೆ. 70 ಶಿಬಿರಗಳಲ್ಲಿ ಸುಮಾರು 1,000 ಶಿಕ್ಷಕರು ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ನಡೆಸುತ್ತಿದ್ದಾರೆ.
ಹೈಯರ್ ಸೆಕೆಂಡರಿ ಮೌಲ್ಯಮಾಪನವನ್ನು 77 ಶಿಬಿರಗಳಲ್ಲಿ ನಡೆಸಲಾಗುವುದು. 25 ದ್ವಿಗುಣ ಮೌಲ್ಯಮಾಪನ ಶಿಬಿರಗಳಾಗಿವೆ. ಮೌಲ್ಯಮಾಪನ ಶಿಬಿರದಲ್ಲಿ ಸುಮಾರು 25000 ಶಿಕ್ಷಕರು ಭಾಗವಹಿಸುತ್ತಿದ್ದಾರೆ.
ಎಂಟು ಕೇಂದ್ರಗಳಲ್ಲಿ ವೊಕೇಶನಲ್ ಹೈಯರ್ ಸೆಕೆಂಡರಿ ಮೌಲ್ಯಮಾಪನ ಶಿಬಿರಗಳನ್ನು ನಡೆಸಲಾಗುವುದು. ಶಿಬಿರದಲ್ಲಿ 2200 ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಓ.ಎಚ್.ಎಸ್.ಎಲ್.ಸಿ ಗಾಗಿ ಎರಡು ಶಿಬಿರಗಳನ್ನು ಸ್ಥಾಪಿಸಲಾಗಿದೆ. ಶಿಬಿರದಲ್ಲಿ 110 ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಸುಮಾರು 20,000 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಿದೆ. ಎ.ಎಚ್.ಎಸ್.ಎಲ್.ಸಿ ಯ ಮೌಲ್ಯಮಾಪನಕ್ಕೂ ಕೇಂದ್ರ ಸ್ಥಾಪಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯ 38.5 ಲಕ್ಷ ಉತ್ತರ ಪತ್ರಿಕೆಗಳು, ಹೈಯರ್ ಸೆಕೆಂಡರಿಯ 52 ಲಕ್ಷ ಉತ್ತರ ಪತ್ರಿಕೆಗಳು ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿಯ 3.4 ಲಕ್ಷ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ ಬಂದಿವೆ. 20ರೊಳಗೆ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಮೇ ಎರಡನೇ ವಾರದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂದು ವರದಿಯಾಗಿದೆ.