ತಿರುವನಂತಪುರಂ: ಎಸ್ ಡಿಪಿಐ ಕೇರಳದಲ್ಲಿ ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಮಾಡಲು ತೀರ್ಮಾನಿಸಿದೆ.
ಈ ಬಾರಿ ಯುಡಿಎಫ್ ಗೆ ಸಂಘಟನೆ ಬೆಂಬಲ ನೀಡಲಿದೆ. ಎಸ್‍ಡಿಪಿಯ ರಾಜಕೀಯ ನಿಲುವು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಕೇರಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುತ್ತಿಲ್ಲ ಎಂದು ರಾಜ್ಯಾಧ್ಯಕ್ಷ ಮುವಾಟ್ಟುಪುಳ ಅಶ್ರಫ್ ಮೌಲವಿ ತಿಳಿಸಿದ್ದಾರೆ. ಯುಡಿಎಫ್ ನ ಎಲ್ಲಾ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಎಸ್.ಡಿ.ಪಿ.ಐ ಬೆಂಬಲಿಸಲಿದೆ ಎಂದಿರುವರು.
ಸದ್ಯದ ಭಾರತದ ಪರಿಸ್ಥಿತಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರೋಧಿ 'ಭಾರತ' ರಂಗವನ್ನು ಮುನ್ನಡೆಸುತ್ತಿರುವ ಪಕ್ಷ ಕಾಂಗ್ರೆಸ್. ಯುಡಿಎಫ್ ಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಎಸ್ ಡಿಪಿಐ ಮುಖಂಡರು ತಿಳಿಸಿದ್ದಾರೆ.ಚುನಾವಣಾ ಪ್ರಚಾರಕ್ಕೆ ಬೇಕಾದ ಬೃಹತ್ ಮೊತ್ತವನ್ನು ಸಂಗ್ರಹಿಸಲು ಸಂಘಟನೆಗೆ ಸಾಧ್ಯವಾಗದ ಪರಿಸ್ಥಿತಿ ಇದರ ಹಿಂದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಕೇರಳದ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.ಎಸ್‍ಡಿಪಿಐ 10,401 ಮತ್ತು ತ್ರಿಶೂರ್‍ನಿಂದ (6,894) 2.73 ಲಕ್ಷ ಮತಗಳನ್ನು ಗಳಿಸಿತ್ತು. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ 18 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಎಸ್ ಡಿಪಿಐಗೆ ಮತ ಹಾಕಬಾರದು ಎಂಬ ನಿಲುವನ್ನು ಎರಡೂ ರಂಗಗಳೂ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರೂ ಗೌಪ್ಯ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಯುಡಿಎಫ್‍ನೊಂದಿಗೆ ಒಪ್ಪಂದ ಮಾಡಲಾಗಿರುವುದಾಗಿ ಬಹಿರಂಗಗೊಂಡಿದೆ. ತೆರೆಮರೆಯಲ್ಲಿ ನಡೆದಿರುವ ವಹಿವಾಟಿನ ವಿವರ ಇನ್ನಷ್ಟೇ ಹೊರಬರಬೇಕಿದೆ.