ನವದೆಹಲಿ: ಭಾರತದ ರಕ್ಷಣಾ ರಫ್ತುಗಳ ಮೌಲ್ಯ ಇದೇ ಮೊದಲ ಬಾರಿಗೆ 20,000 ಕೋಟಿ ರೂಪಾಯಿಗಳನ್ನು ದಾಟಿದೆ. 2023-24 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂಪಾಯಿ ತಲುಪಿದೆ.
ಈ ವರ್ಷ ರಕ್ಷಣಾ ರಫ್ತುದಾರರಿಗೆ ನೀಡಲಾದ ರಫ್ತು ದೃಢೀಕರಣ ಸಂಖ್ಯೆಯೂ ಹೆಚ್ಚಳವನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ರಕ್ಷಣಾ ರಫ್ತು ಈ ವರ್ಷ ಶೇ.32.5 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ರಕ್ಷಣಾ ರಫ್ತು ಮೌಲ್ಯ 15,920 ಕೋಟಿ ರೂಪಾಯಿಗಳಷ್ಟಿತ್ತು.
FY 2013-14 ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಖಾಸಗಿ ವಲಯ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಪಿಎಸ್‌ಯು) ಸೇರಿದಂತೆ ರಕ್ಷಣಾ ಉದ್ಯಮದ ಪ್ರಯತ್ನಗಳು ಈ ಸಾಧನೆಗೆ ಕಾರಣವೆಂದು ರಕ್ಷಣಾ ಸಚಿವಾಲಯ ಹೇಳಿದೆ. "ಖಾಸಗಿ ವಲಯ ಮತ್ತು DPSU ಗಳು ಕ್ರಮವಾಗಿ 60% ಮತ್ತು 40% ರಷ್ಟು ಕೊಡುಗೆ ನೀಡಿವೆ, ರಕ್ಷಣಾ ಸಚಿವಾಲಯ ತಿಳಿಸಿದೆ.