ಕಾಸರಗೋಡು: ಜಿಲ್ಲೆಯ ಖಾಸಗಿ ಬಸ್ ನೌಕರರಿಗೆ 2023-2024ನೇ ಸಾಲಿನ ಬೋನಸ್ ಮಂಜೂರುಗೊಳಿಸಲಾಗಿದೆ. ಬೋನಸ್ ಪಾವತಿ ಕುರಿತು ಕಾರ್ಮಿಕ ಯೂನಿಯನ್ ಪ್ರತಿನಿಧಿಗಳು ಮತ್ತು ಬಸ್ ನಿರ್ವಾಹಕರ ಒಕ್ಕೂಟ ನಡೆಸಿದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಕೈಗೊಂಡ ತೀರ್ಮಾನದನ್ವಯ ಬೋನಸ್ ಮಂಜೂರುಗೊಳಿಸಲಾಗಿದೆ.
ಯೂನಿಯನ್ ಮತ್ತು ಬಸ್ ನಿರ್ವಾಹಕರ ಒಕ್ಕೂಟ ನಡೆಸಿದ ಚರ್ಚೆಯನ್ವಯ ಈ ಹಿಂದಿನ ವರ್ಷಗಳಲ್ಲಿ ಬೋನಸ್ ಪಾವತಿಸಿದಂತೆ ಮೊದಲ ಕಂತನ್ನು ಏಪ್ರಿಲ್ 10 ರ ಮೊದಲು ಮತ್ತು ಎರಡನೇ ಕಂತು ಆಗಸ್ಟ್ 30 ರ ಮೊದಲು ಪಾವತಿಸಲು ಒಪ್ಪಿಗೆ ನೀಡಲಾಗಿತ್ತು. ಒಕ್ಕೂಟದ ನಿರ್ಧಾರವನ್ನು ಕಾರ್ಮಿಕ ಪ್ರತಿನಿಧಿಗಳೂ ಒಪ್ಪಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.