ಮುಳ್ಳೇರಿಯ : ಬೆಳ್ಳೂರು ಅಡ್ವಳಬೀಡು ಧರ್ಮದೈವ ಶ್ರೀ ಪಿಲಾಡ್ಕತ್ತಯ ದೈವದ ನೇಮ ಮೇ 20ಹಾಗೂ 21ರಂದು ಜರುಗಲಿದೆ. ಮೇ 14ರಂದು ಗೊನೆ ಮುಹೂರ್ತ ನಡೆಯಲಿದೆ. 20ರಂದು ಸಂಜೆ 4ಕ್ಕೆ ನಾಗತಂಬಿಲ, 6ಕ್ಕೆ ಶ್ರೀದೈವಗಳ ಭಂಡಾರ ಏರುವುದು. 7.30ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಮಗವಾಗಿ ಗಮಕ ವಾಚನ, ಹರಿಕಥಾ ಕಾಲಕ್ಷೇಪ, ಸಾಂಸ್ಕøತಿಕ ವೈವಿಧ್ಯ, ಸಂಗೀತ ರಸಮಂಜರಿ ನಡೆಯುವುದು.
21ರಂದು ಬೆಳಗ್ಗೆ 7ರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಭಜನಾ ಸಂಕೀರ್ತನೆ, 9.30ರಿಂದ ಧರ್ಮದೈವ ಶ್ರೀ ಪಿಲಾಡ್ಕತ್ತಯ ದೈವದ ನೇಮ ನಡೆಯುವುದು.