ಮುಂಬರುವ ಟಿ20 ವಿಶ್ವಕಪ್‍ಗೆ 15 ಮಂದಿಯ ನ್ಯೂಝಿಲ್ಯಾಂಡ್ ತಂಡವನ್ನು ಪುಟಾಣಿಗಳಿಂದ ಪ್ರಕಟಿಸುವ ಮೂಲಕ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿದೆ.
ಮುಂಬರುವ ಟಿ20 ವಿಶ್ವಕಪ್‍ಗೆ 15 ಮಂದಿಯ ನ್ಯೂಝಿಲ್ಯಾಂಡ್ ತಂಡವನ್ನು ಪುಟಾಣಿಗಳಿಂದ ಪ್ರಕಟಿಸುವ ಮೂಲಕ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜೂನ್‍ನಲ್ಲಿ ಜಂಟಿಯಾಗಿ ಈ ಕೂಟ ಆಯೋಜಿಸಲಿವೆ.
ಈ ಮಕ್ಕಳು ವಿಹಂಗಮವಾಗಿ ಆಟಗಾರರ ಹೆಸರನ್ನು ಪ್ರಕಟಿಸುವ ಜತೆಗೆ ಕೊನೆಯಲ್ಲಿ ಅವರನ್ನು ಅಭಿನಂದಿಸಿದ್ದರು. ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸ್ ಅವರು 2021ರ ರನ್ನರ್ ಅಪ್ ತಂಡವನ್ನು ನಾಲ್ಕನೇ ಬಾರಿಗೆ ಮುನ್ನಡೆಸಲಿದ್ದಾರೆ. ವೇಗದ ಬೌಲರ್ ಟಿಮ್ ಸೌಥಿ ಸತತ ಏಳನೇ ಬಾರಿಗೆ ಚುಟುಕು ಕ್ರಿಕೆಟ್‍ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್ ಐದನೇ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಕ್ ಚಾಪ್‍ಮನ್, ಜಿಮ್ಮಿ ನೀಶಮ್ ಮತ್ತು ಮೈಕೆಲ್ ಬ್ರೇಸ್‍ವೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.