ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 21ರಿಂದ ಏಪ್ರಿಲ್ 30ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಕಾರ್ಯಕ್ರಮದ ಸಿದ್ಧತೆಗಳು ಅಂತಿಮಹಂತದಲ್ಲಿದ್ದು, ಮಂಗಳವಾರ ಬೆಳಗ್ಗೆ ಚಪ್ಪರಮುಹೂರ್ತ ನೆರವೇರಿತು.
ಕ್ಷೇತ್ರಾಚಾರ್ಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಕಾರಿ ಬ್ರಹ್ಮಶ್ರೀ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರು ಮುಹೂರ್ತ ನೆರವೇರಿಸಿ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕುಂಟಿಕಾನಮಠ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಶ್ಯಾಮ ಭಟ್ ಕೆ.ಎಂ., ರಾಘವ ಭಂಡಾರಿ, ರವಿ ಕುಂಟಿಕಾನ, ವಿಷ್ಣುಶರ್ಮ ನೂಜಿಲ, ಪಾಕತಜ್ಞ ಗಣೇಶ್ ಭಟ್ ಸರಳಿ, ಶಂಕರನಾರಾಯಣ ಭಟ್ ಕೆ.ಎಂ., ನಟರಾಜ, ಗೋವಿಂದ ಭಟ್ ಕೆ.ಎಂ. ಹಾಗೂ ಸ್ವಯಂಸೇವಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.