HEALTH TIPS

ಏಪ್ರಿಲ್ 21ರಿಂದ ಏ.30ರ ತನಕ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

                    ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನವು ಕಾಸರಗೋಡು ಜಿಲ್ಲೆಯ ನೀರ್ಚಾಲು ಗ್ರಾಮದಲ್ಲಿ ಪ್ರಾಕೃತಿಕ ಚೆಲುವಿನ ಸುಂದರ ತಾಣದಲ್ಲಿ ನೆಲೆನಿಂತಿದೆ. ನೀರ್ಚಾಲು ಬದಿಯಡ್ಕ ಪೇಟೆಯ ಮಧ್ಯೆ ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕ ಭಾಗಕ್ಕೆ ತೆರಳುವ ರಸ್ತೆಯಲ್ಲಿ ದೇವರಮೆಟ್ಟು ಎಂಬಲ್ಲಿಂದ ಕುಂಟಿಕಾನ ಶಾಲೆ ಕಳೆದು ಕುಂಟಿಕಾನ ಮಠವು ಕಂಡುಬರುತ್ತದೆ. ಅನೇಕ ತಲೆಮಾರುಗಳ ಹಿಂದೆ ಶ್ರೀಕುಂಟಿಕಾನ ಮಠವೆಂಬ ಕಾರಣಿಕ ಕ್ಷೇತ್ರವು ಕುಂಟಿಕಾನ ಮಠದ ಮನೆಯ ಮಹಾತಪಸ್ವಿ ಸಾಧಕರಿಂದ ಸ್ಥಾಪನೆಯಾಯಿತು. ಶ್ರೀ ಶಂಕರನಾರಾಯಣ ದೇವರು, ಅನ್ನಪೂರ್ಣೇಶ್ವರೀ ದೇವಿ ಹಾಗೂ ಉಳ್ಳಾಕುಳು, ಧೂಮಾವತಿ ದೈವ, ರಕ್ತೇಶ್ವರಿ ಮೊದಲಾದ ದಿವ್ಯಶಕ್ತಿಗಳು ನೆಲೆಸಿ ಭಕ್ತರ ಅಭೀಷ್ಟಗಳನ್ನು ನೆರವೇರಿಸಿ ಅಭಯವನ್ನು ನೀಡುತ್ತಿರುವುದು ಇಲ್ಲಿನ ಕಾರಣಿಕೆ ವೈಶಿಷ್ಟ್ಯ.

ಶ್ರೀರಾಮಚಂದ್ರಾಪುರ ಮಠ ಹಾಗೂ ಕುಂಟಿಕಾನ ಮಠ :

            ಶ್ರೀರಾಮಚಂದ್ರಾಪುರ ಮಠದ ಯತಿಗಳು ಕುಂಬಳೆ ಸೀಮೆಗೆ ಆಗಮಿಸುವ ಸಂದರ್ಭದಲ್ಲಿ ಕುಂಟಿಕಾನ ಮಠದಲ್ಲೇ ಮೊಕ್ಕಾಂ ಮಾಡಿ ಸೀಮೆಯ ಸಮಸ್ತಶಿಷ್ಯವೃಂದವನ್ನು ಅನುಗ್ರಹಿಸುವುದು ಪ್ರಾಚೀನ ಪರಂಪರೆ. ಆದುದರಿಂದ ಕುಂಟಿಕಾನ ಮಠಕ್ಕೂ ಶ್ರೀಗುರುಪೀಠಕ್ಕೂ ಪ್ರಾಚೀನ ಕಾಲದಿಂದಲೇ ನಿಕಟ ಸಂಪರ್ಕ ಹಾಗೂ ಸಂಬಂಧವಿದೆ. ಶ್ರೀಗುರುಗಳ ಚಾತುರ್ಮಾಸ್ಯಾದಿಧಿ ಕಾರ್ಯಕ್ರಮಗಳು ಇಲ್ಲಿ ನೆರವೇರಿರುವುದು ಚಾರಿತ್ರಿಕವಾದ ಸತ್ಯ. ಆದ್ದರಿಂದ ಈ ಪವಿತ್ರ ಕ್ಷೇತ್ರದಲ್ಲಿ ನೆಲೆಸಿರುವ ದೈವ ದೇವರುಗಳ ಶಕ್ತಿಗಳೊಂದಿಗೆ ಶ್ರೀಗುರುಗಳ ತಪಚ್ಛಕ್ತಿಯೂ ಸೇರಿರುವುದು ಭಕ್ತಜನರ ಭಾಗ್ಯವಿಶೇಷ ಎಂದೇ ಹೇಳಬಹುದು.

             ಕುಂಟಿಕಾನ ಮಠದ ಮನೆಯವರು ಗ್ರಾಮದ ಹತ್ತು ಸಮಸ್ತರ ಕೂಡುವಿಕೆಯಿಂದ, ಶ್ರೀಗುರುಗಳ ದಿವ್ಯಾನುಗ್ರಹದಿಂದ ಇಲ್ಲಿ ನೆಲೆಸಿರುವ ದಿವ್ಯಶಕ್ತಿಗಳನ್ನು ತಲೆತಲಾಂತರಗಳಿಂದ ಆರಾಸಿಕೊಂಡು ಬರುತ್ತಿದ್ದಾರೆ. ಪ್ರತಿನಿತ್ಯ ಮೂರು ಹೊತ್ತು ನಿತ್ಯಪೂಜೆ, ವಿಶೇಷ ಪೂಜೆಗಳು, ಉತ್ಸವಗಳು, ದೈವಗಳ ನೇಮ ಇತ್ಯಾದಿಗಳು ಅನಾಚೂನವಾಗಿ ಇಲ್ಲಿ ನಡೆದುಬರುತ್ತಿದ್ದು, ಧಾರ್ಮಿಕ, ಸಾಂಸ್ಕøತಿಕ ಕೇಂದ್ರವಾಗಿ ಕುಂಟಿಕಾನ ಮಠವು ಪ್ರಸಿದ್ಧಿಯನ್ನು ಪಡೆದಿದೆ.

ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ :

             ಏಪ್ರಿಲ್ 21ರಿಂದ ಏಪ್ರಿಲ್ 30ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಏಪ್ರಿಲ್ 21ರಂದು ಶ್ರೀ ಮಹಾಗಣಪತಿ ಹೋಮ, 9 ಗಂಟೆಗೆ ಮಾಡತ್ತಡ್ಕ ಶ್ರೀಹರಿಹರ ಭಜನಾ ಮಂದಿರದಿಂದ ಹಸಿರುವಾಣಿ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 10 ಗಂಟೆಗೆ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆಯಲಿದೆ. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ದೀಪಬೆಳಗಿಸುವರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಸಂಜೆ 5 ಗಂಟೆಗೆ ಕ್ಷೇತ್ರ ತಂತ್ರಿಗಳವರ ಆಗಮ, ಪೂರ್ಣಕುಂಭ ಸ್ವಾಗತ, ಪ್ರಾರ್ಥನೆ, ವಿವಿಧ ತಾಂತ್ರಿಕ ಕಾರ್ಯಕ್ರಮಗಳ ಆರಂಭ, ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, 6 ಗಂಟೆಗೆ ಪರಮಪೂಜ್ಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ಆಶೀರ್ವಚನ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರಾಚಾರ್ಯ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು, ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಉಪಸ್ಥಿತರಿರುವರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದ್ಯಮಿ ಕೆ.ಕೆ.ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ - ಬೆಳ್ತಂಗಡಿ, ಉದ್ಯಮಿ ಕೃಷ್ಣ ಪ್ರಸಾದ ರೈ ಕುತ್ತಿಕಾರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೇಶವಪ್ರಸಾದ ಮುಳಿಯ, ಬೆಂಗಳೂರು ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್, ಗೋಪಾಲಕೃಷ್ಣ ಭಟ್ ಎಡನೀರು, ಮಾತೃಸಮಿತಿ ಅಧ್ಯಕ್ಷೆ ಜಯಂತಿ ಬಿ. ವೇದಿಕೆಯಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕ್ಷೇತ್ರ ಪುನರ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಶಿಲ್ಪಿಗಳಿಗೆ ಗೌರವಾರ್ಪಣೆ ನಡೆಯಲಿದೆ. ನಂತರ ವೇದಿಕೆಯಲ್ಲಿ ಮಾಡತ್ತಡ್ಕ ಹರಿಹರ ಬಾಲಗೋಕುಲದ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

             ಏಪ್ರಿಲ್ 22ರಿಂದ ಏಪ್ರಿಲ್ 25ರ ತನಕ ಪ್ರಾತಃಕಾಲ ಗಣಪತಿಹೋಮ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಬೆಳಗ್ಗೆ ಹಾಗೂ ಸಂಜೆ ಭಜನಾ ಝೇಂಕಾರ ಊರಿನ ವಿವಿಧ ಭÀಜನಾ ತಂಡಗಳಿಂದ ಭಜನೆ, ಸಂಗೀತ ಕಛೇರಿ, ಹರಿಕಥೆ, ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಏಪ್ರಿಲ್ 22ರಂದು ಸಂಜೆ 7 ರಿಂದ ವೈಷ್ಣ್ಣವಿ ನಾಟ್ಯಾಲಯ ಪುತ್ತೂರು ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ, ಏಪ್ರಿಲ್ 23ರಂದು ಸಂಜೆ 7ರಿಂದ ಯಕ್ಷಗಾನ ಬಯಲಾಟ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ, ಏ.24ರಂದು ಸಂಜೆ 6.30ರಿಂದ 10ರ ತನಕ ತುಡರ್ ಕಲಾವಿದೆರ್ ಕಳತ್ತೂರು ಇವರಿಂದ ರತ್ನಾಕರ ರಾವ್ ಕಾವೂರು ವಿರಚಿತ ತುಳು ಪೌರಾಣಿಕ ನಾಟಕ `ವಿಶ್ವಜನನಿ', ಏ. 25 ರಂದು ಸಂಜೆ 7ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮೀ ನಾಟ್ಯವಿದ್ಯಾನಿಲಯ ಕುಂಬಳೆ ಇವರಿಂದ ನೃತ್ಯಸಂಭ್ರಮ ನಡೆಯಲಿದೆ. ಏಪ್ರಿಲ್ 25ರಂದು ಸಂಜೆ 4.30ಕ್ಕೆ ಗೋಕರ್ಣಮಂಡಲಾೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಗಮನ, ಕುಂಟಿಕಾನಮಠದಲ್ಲಿ ಪೂರ್ಣಕುಂಭ ಸ್ವಾಗತ, ಧೂಳೀಪೂಜೆ ನಡೆಯಲಿದೆ.

ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ :

             ಏ.26ರಂದು ಪ್ರಾತಃಕಾಲ 4.30ರಿಂದ 108 ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾ ಪಾಣಿ, 8.48ರಿಂದ 9.20ರ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ  ಶ್ರೀ ಶಂಕರನಾರಾಯಣ ಸಹಿತ ಸಪರಿವಾರ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1 ಕ್ಕೆ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಆಶೀರ್ವಚನ, ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ತಾಯಂಬಕ, ಶ್ರೀದೇವರ ಬಲಿ ಉತ್ಸವ, ಏ.27ರಂದು ಬೆಳಗ್ಗೆ 9.30ಕ್ಕೆ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಪ್ರಸಾದ ಭೋಜನ. ರಾತ್ರಿ ಕಾರ್ತಿಕಪೂಜೆ, ಮುಂಡಿಗೆ ವನಕ್ಕೆ ಭಂಡಾರ ಹೊರಡುವುದು, 9.00ಕ್ಕೆ  ಕುಂಟಿಕಾನಮಠದಲ್ಲಿ ಅನ್ನಸಂತರ್ಪಣೆ. ಏ.28ರಂದು ಮುಂಡಿಗೆ ವನದಲ್ಲಿ ಕುಂಟಿಕಾನ ಧೂಮಾವತೀ ದೈವಕ್ಕೆ ಪುದ್ವಾರು ಮೆಚ್ಚಿನ ನೇಮ, ಅರಸಿನ ಹುಡಿ ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಕುಂಟಿಕಾನಮಠದಲ್ಲಿ ಶ್ರೀದೇವರಿಗೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ಏ.29ರಂದು ಬೆಳಗ್ಗೆ 9.00ಕ್ಕೆ ಶ್ರೀಕ್ಷೇತ್ರದ ಬಡಗುಬಾಗಿಲಲ್ಲಿ ರಾಜದೈವದ ನೇಮ, ಅರಸಿನ ಹುಡಿ ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ಏ.30ರಂದು ಇರ್ವೆರು ಉಳ್ಳಾಕುಲು, ಕುಂಟಿಕಾನ ಧೂಮಾವತೀ ದೈವಗಳ ನೇಮ, ಅರಸಿನಹುಡಿ ಪ್ರಸಾದ ವಿತರಣೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries