ನವದೆಹಲಿ: ಆಹಾರ ಪೂರೈಕೆ ಆಪ್ ಜೊಮ್ಯಾಟೋ ಇಂದು 23 ಕೋಟಿ ರೂಪಾಯಿ ಮೊತ್ತದ ಜಿಎಸ್ ಟಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಕ್ಯಾಪಿಟಲ್ ಮಾರ್ಕೆಟ್ಸ್ ಗೆ ಬರೆದಿರುವ ಪತ್ರದಲ್ಲಿ ಜೊಮ್ಯಾಟೋ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅನುಸರಣೆ ಅಧಿಕಾರಿ ಸಂಧ್ಯಾ ಸೇಥಿಯಾ ಜಿಎಸ್ ಟಿ ಬೇಡಿಕೆಗೆ ವಿರುದ್ಧ ಸಂಸ್ಥೆ ಬಲವಾದ ಪ್ರಕರಣವನ್ನು ಹೊಂದಿದೆ ಎಂದು ಹೇಳಿದ್ದಾರೆ.
"ನಾವು ಅರ್ಹತೆಯ ಮೇಲೆ ಬಲವಾದ ಪ್ರಕರಣವನ್ನು ಹೊಂದಿದ್ದೇವೆ ಮತ್ತು ಕಂಪನಿಯು ಸೂಕ್ತ ಪ್ರಾಧಿಕಾರದ ಮುಂದೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತದೆ ಎಂದು ನಾವು ನಂಬುತ್ತೇವೆ" ಎಂದು ಸೇಥಿಯಾ ಹೇಳಿದ್ದಾರೆ. ಝೊಮಾಟೊ ಬಡ್ಡಿ ಮತ್ತು ದಂಡದ ಜೊತೆಗೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಆಗಿ ಪಡೆದ ಹೆಚ್ಚುವರಿ ಮೊತ್ತಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಬೇಡಿಕೆಯನ್ನು ಸ್ವೀಕರಿಸಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ನೊಟೀಸ್ ಗೆ ಪ್ರತಿಕ್ರಿಯೆಯಾಗಿ, ಜೊಮಾಟೊ ಸಂಬಂಧಿತ ದಾಖಲೆಗಳು ಮತ್ತು ನ್ಯಾಯಾಂಗ ಪೂರ್ವನಿದರ್ಶನಗಳೊಂದಿಗೆ ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿದೆ ಎಂದು ಸಂಸ್ಥೆ ತಿಳಿಸಿದೆ.