ಕೊಚ್ಚಿ: ಕೇರಳದಲ್ಲಿ 23 ಆಕ್ರಮಣಕಾರಿ ತಳಿಯ ವಿದೇಶಿ ನಾಯಿಗಳಾದ ರಾಟ್‍ವೀಲರ್, ಪಿಟ್‍ಬುಲ್ ಮತ್ತು ಟೆರಿಯರ್ ತಳಿಗಳನ್ನು ಸಾಕಲು ಹೈಕೋರ್ಟ್ ಅನುಮತಿ ನೀಡಿದೆ.
ವಿದೇಶಿ ತಳಿಯ ನಾಯಿಗಳಿಗೆ ಸಂತಾನಹರಣ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬ ಶ್ವಾನ ಪ್ರೇಮಿಗಳ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಅದಕ್ಕಾಗಿಯೇ ಅವುಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸದಿರಲು ನಿರ್ಧರಿಸಲಾಯಿತು.
ಇದೇ ವೇಳೆ, ಈ 23 ತಳಿಗಳ ನಾಯಿಗಳ ಆಮದು ಮತ್ತು ಮಾರಾಟದ ಮೇಲಿನ ನಿಷೇಧವು ಮುಂದುವರಿಯುತ್ತದೆ. ಶ್ವಾನ ಪ್ರೇಮಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಟಿ.ಆರ್.ರವಿ ಅವರಿದ್ದ ಏಕ ಪೀಠ ಈ ಆದೇಶ ನೀಡಿದೆ. ವಿದೇಶಿ ತಳಿಯ ನಾಯಿಗಳಿಗೆ ಸಂತಾನಹರಣ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬ ಶ್ವಾನ ಪ್ರೇಮಿಗಳ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಅದಕ್ಕಾಗಿಯೇ ಅವುಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸದಿರಲು ನಿರ್ಧರಿಸಲಾಯಿತು.
ವಿದೇಶಿ ನಾಯಿಗಳ ಮಾಲೀಕರು ಅವುಗಳನ್ನು ತಾತ್ಕಾಲಿಕವಾಗಿ ಮನೆಯಲ್ಲಿ ಸಾಕಬಹುದು ಎಂದು ನ್ಯಾಯಾಲಯ ಹೇಳಿದೆ. ಬೇಸಿಗೆ ರಜೆಯ ನಂತರ ಹೈಕೋರ್ಟ್ ಈ ವಿಷಯವನ್ನು ವಿವರವಾಗಿ ಪರಿಗಣಿಸಲಿದೆ.
ಮಾನವನ ಜೀವಕ್ಕೆ ಅಪಾಯ ತಂದೊಡ್ಡುವ 23 ಜಾತಿಯ ವಿದೇಶಿ ನಾಯಿಗಳ ಆಮದು, ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಇದೇ ಕಳೆದ ತಿಂಗಳ 13ರಂದು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ವಿದೇಶಿ ನಾಯಿಗಳಾದ ರೊಟ್‍ವೀಲರ್, ಪಿಟ್ಬುಲ್, ಟೆರಿಯರ್, ವುಲ್ಫ್‍ಡಾಗ್ಸ್ ಮತ್ತು ಮ್ಯಾಸ್ಟಿಫ್‍ಗಳನ್ನು ನಿಷೇಧಿಸಲಾಗಿತ್ತು.