ತಿರುವನಂತಪುರಂ: ವೆಂಗನೂರು ಪೂರ್ಣಿಕಾವ್ ಬಾಲಾ ತ್ರಿಪುರಸುಂದರಿದೇವಿ ದೇವಸ್ಥಾನದಲ್ಲಿ ಪ್ರತಿμÁ್ಠಪಿಸಲಿರುವ ಆದಿಪರಾಶಕ್ತಿ ವಿಗ್ರಹದ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ರಾಜಸ್ಥಾನದ ಜೈಪುರದಲ್ಲಿ ವಿಗ್ರಹವನ್ನು ತಯಾರಿಸಲಾಗಿದೆ.
ಆದಿಪರಾಶಕ್ತಿ, ರಾಜಮಾತಂಗಿ ಮತ್ತು ದುರ್ಗಾದೇವಿಯ ವಿಗ್ರಹಗಳನ್ನು ಎರಡು ವರ್ಷಗಳಲ್ಲಿ ಕೆತ್ತಲಾಗಿದೆ. ಆದಿ ಪರಾಶಕ್ತಿಯ ವಿಗ್ರಹವನ್ನು 18.5 ಅಡಿ ಎತ್ತರದಲ್ಲಿ ಒಂದೇ ಕಲ್ಲಿನಿಂದ ಮಾಡಲಾಗಿದೆ. ಪೀಠ ಸೇರಿಸಿದಾಗ 23 ಅಡಿ ಎತ್ತರವಿದೆÀ. ಇದು ದೇಶದ ಅತಿ ಎತ್ತರದ ಅಮೃತಶಿಲೆಯ ವಿಗ್ರಹವಾಗಿದೆ.
ರಾಜಸ್ಥಾನದಲ್ಲಿ ಅಮೃತಶಿಲೆಯನ್ನು ಖರೀದಿಸಿ ಏಕಶಿಲಾ ವಿಗ್ರಹ ಕೆತ್ತಲಾಗಿದೆ. ಆದಿಪರಾಶಕ್ತಿ ಆಕೃತಿಯನ್ನು 30 ಅಡಿ ಎತ್ತರ, 20 ಅಡಿ ದಪ್ಪ ಮತ್ತು 40-50 ಟನ್ ತೂಕದ ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ವಿಗ್ರಹಕ್ಕೆ ಸುಮಾರು ಆರು ಕೋಟಿ ರೂ.ವೆಚ್ಚ ತಗಲಿದೆ.
ವಿಗ್ರಹಗಳನ್ನು ಕೆತ್ತಿದ ನಂತರ, ಜೈಪುರ ರಾಮ್‍ಸಿಂಗ್ ಅವರ ಅರಮನೆಯಲ್ಲಿರುವ ಕಾಳಿಮಾತಾ ದೇವಾಲಯದಲ್ಲಿ ಪೂಜೆಗಳು ಪ್ರಾರಂಭವಾದವು. ಬಳಿಕ ವಿಗ್ರಹಗಳನ್ನು ಕಳಿಸಿಕೊಡಲಾಯಿತು. ಮೂರು ಟ್ರೇಲರ್‍ಗಳಲ್ಲಿರುವ ವಿಗ್ರಹಗಳು ಹದಿನೈದು ದಿನಗಳಲ್ಲಿ ಪೂರ್ಣಿಕಾವ್ ತಲುಪುವ ನಿರೀಕ್ಷೆಯಿದೆ.