ಕುಂಬಳೆ: ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ಭಂಡಾರ ಸ್ಥಾನ ಹಾಗೂ ಗುರುಪೀಠದ ಶಿಲಾನ್ಯಾಸ ಸಮಾರಂಭ ಏ. 24ರಂದು ಮಧ್ಯಾಹ್ನ 12.30ರಿಂದ 1.25ರ ಮಧ್ಯೆ ನಡೆಯಲಿರುವುದು.
24ರಮದುಬೆಳಗ್ಗೆ 9.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನವೀಕರಣ ಸಮಿತಿ ಗೌರವದ್ಯಕ್ಷ ಬಿ. ರಾಮದಸ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಅರವತ್ ಕೆ.ಯು ಪದ್ಮನಾಭ ತಂತ್ರಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕಾಲೆ ಶ್ರಿ ಕಾಳಿಕಾಂಬಾ ದೇವಸ್ತನದ ಪುರೋಹಿತ ಬ್ರಹ್ಮಶ್ರೀ ರಾಮಕೃಷ್ಣ ಆಚಾಯ್ ಆಶೀರ್ವಚನ ನಿಡುವರು. ಕ್ಷೇತ್ರದ ಪ್ರಧಾನ ಕಾರ್ನವ ಬಾಬು ಕಾರ್ನವರ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮೋಹನದಾಸ ರೈ ಬಂಬ್ರಾಣ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಚ್ಘೌಕಿ ಎರಿಯಾಕೋಟ ಭಗವತೀ ಕ್ಷೇತ್ರದ ಚಂದ್ರಶೇಖರ ಕಾರ್ನವ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ ಸೆಟ್ಟಿ, ಡಾ. ಮುಕುಂದ್ ಕುಂಬಳೆ, ಕುಂಬಳೆ ಗ್ರಾಪಂ ಅಧ್ಯಕ್ಷೆ ತಾಹಿರಾಯೂಸುಫ್, ಉದ್ಯಮಿ ವಸಂತ ಪೈ ಬದಿಯಡ್ಕ, ಮಂಜುನಾಥ ಆಳ್ವ ಮಡ್ವ ಮೊದಲಾದವರು ಪಾಲ್ಗೊಳ್ಳುವರು.