ಆಲಪ್ಪುಳ; ಎನ್‍ಡಿಎ ಅಲಪ್ಪುಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಸುರೇಂದ್ರನ್ ಅವರ ಪ್ರಚಾರದ ಯಶಸ್ಸಿಗೆ ಮೆರಗು ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
24ರಂದು ಬೆಳಗ್ಗೆ 10 ಗಂಟೆಗೆ ಪುನ್ನಪ್ರಾ ಕಾರ್ಮೆಲ್ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ ಮಾಡಲಿದ್ದಾರೆ. ಎನ್ ಡಿಎ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.
ಅಭಿವೃದ್ಧಿ ದಾಖಲೆ ಹಾಗೂ ಮಹಿಳಾ ಪ್ರಣಾಳಿಕೆ ಬಿಡುಗಡೆ:
ಆಲಪ್ಪುಳ: ಎನ್ ಡಿಎ ಅಭ್ಯರ್ಥಿ ಶೋಭಾ ಸುರೇಂದ್ರನ್ ಅವರ ಅಭಿವೃದ್ಧಿ ದಾಖಲೆ ಹಾಗೂ ಮಹಿಳಾ ಪ್ರಣಾಳಿಕೆ ಇಂದು ಬಿಡುಗಡೆಯಾಗಲಿದೆ. ಕೊಯಮತ್ತೂರು ಶಾಸಕ ಹಾಗೂ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಬೆಳಗ್ಗೆ 10 ಗಂಟೆಗೆ ಎನ್ ಡಿಎ ಚುನಾವಣಾ ಸಮಿತಿ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ.