HEALTH TIPS

25 ಸಾವಿರ ಸಂಬಳ, ಮೊಮೊಸ್ ಅಂಗಡಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ; 'ವಾಕ್-ಇನ್ ಇಂಟರ್ವ್ಯೂನಾ?' ಎಂದ್ರು ನೆಟ್ಟಿಗರು

 

ವದೆಹಲಿ: ಕಾಲೇಜು ಮುಗಿಸಿ, ಆದಷ್ಟು ಬೇಗ ಕೆಲಸ ಗಿಟ್ಟಿಸಿಕೊಳ್ಳಬೇಕು, ಒಳ್ಳೆಯ ಸ್ಯಾಲರಿ ಸಿಗಬೇಕು ಎಂಬುದು ಎಲ್ಲರ ಆಸೆ. ಆದರೆ ವಾಸ್ತವ ಜಗತ್ತಿಗೆ ಕಾಲಿಟ್ಟಾಗಲೇ ಅವರಿಗೆ ಸಂಬಳದ ವಾಸ್ತವತೆ ಗೊತ್ತಾಗುತ್ತದೆ. ಆದರೆ ಇಲ್ಲೊಬ್ಬ ಮೊಮೊಸ್​ ಅಂಗಡಿ ಮಾಲೀಕ ಸಹಾಯಕನ ಅಗತ್ಯ ಇದೆ ಕೈತುಂಬಾ ಸಂಬಳ ಕೊಡುವುದಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಹೆಲ್ಪರ್ ಪ್ಯಾಕೇಜ್ ಗೊತ್ತಾದ್ರೆ ನೀವೂ ಬೆಚ್ಚಿ ಬೀಳುತ್ತೀರಿ.


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಖಾಲಿ ಹುದ್ದೆಯನ್ನು ಬರೆದಿರುವ ಪೋಸ್ಟರ್ ಅನ್ನು ನೋಡಲಾಗಿದೆ. ಈ ಪೋಸ್ಟರ್‌ನಲ್ಲಿ, 'ಸಹಾಯಕನ ಅಗತ್ಯವಿದೆ. ವೇತನ 25 ಸಾವಿರ ರೂ. ಈ ಫೋಟೋವನ್ನು 'ಈ ಸ್ಥಳೀಯ ಮೊಮೊ ಅಂಗಡಿಯು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳು ನೀಡುವುದಕ್ಕಿಂತ ಉತ್ತಮ ಪ್ಯಾಕೇಜ್‌ಗಳನ್ನು ನೀಡುತ್ತಿದೆ' ಎಂಬ ಶೀರ್ಷಿಕೆಯಲ್ಲಿ ಸೋಶಿಯಲ್​​ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಪೋಸ್ಟ್ ನೋಡಿದ ನಂತರ, ಬಳಕೆದಾರರು, ನೀವು ಪ್ರತಿದಿನ ತಿನ್ನಲು ಉಚಿತ ಮೊಮೊಸ್​​ಗಳನ್ನು ಸಹ ಪಡೆಯುತ್ತೀರಿ. ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕಳುಹಿಸಿ. TCS ಗಿಂತ ಉತ್ತಮವಾಗಿ ನೀಡುತ್ತಿದ್ದಾರೆ. ಇಲ್ಲಿ ವಾಕ್-ಇನ್ ಸಂದರ್ಶನವಿದೆಯೇ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries