ಉಪ್ಪಳ: ಬಾಯಾರು ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶ, ಶಿಖರ ಪ್ರತಿಷ್ಠೆ, ಕುಂಭಾಭಿಷೇಕ ಹಾಗೂ ಶತಚಂಡಿಕಾ ಯಾಗ ಏ. 26ರಿಂದ 28ರ ವರೆಗೆ ಜರುಗಲಿದೆ. ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀ ತೀರ್ಥರ ಕರಕಮಲಸಂಜಾತ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿರುವುದು.
26ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣಮುಹೂರ್ತದೊಂದಿಗೆ 108ಕಾಯಿ ಗಣಹೋಮ, ಋಗ್ವೇದ ಪಾರಾಯಣ, ಶತಚಂಡಿಕಾ ಯಾಗಾಂಗ ಸಪ್ತಶತೀಪಾರಾಯಣ ಆರಂಭಗೊಳ್ಳುವುದು. 27ರಂದು ಬೆಳಗ್ಗೆ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, ಸಂಜೆ 5ರಿಂದ ಸುದರ್ಶನ ಹೋಮ, 108ಕಲಶಸಹಿತ ಬ್ರಹ್ಮಕಲಶ ಪೂಜೆ, ಶಿಖರಾಧಿವಾಸ, ಶತಚಂಡಿಕಾ ಯಾಗಾಂಗ ಕಲಶಾರಾಧನೆ, ದುರ್ಗಾನಮಸ್ಕಾರ ಪೂಜೆ ನಡೆಯುವುದು.
28ರಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ದುರ್ಗಾಹೋಮ, ಅಗ್ನಿಮಥನ, ಶತಚಂಡಿಕಾ ಯಾಗಾರಂಭ, ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರಿಗೆ ಪೂರ್ಣಕುಂಭ ಸ್ವಾಗತ, ಶ್ರೀ ಜಗದ್ಗುರುಗಳ ದಿವ್ಯಹಸ್ತದಿಂದ ಶ್ರೀದೇವಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಶ್ರೀಜಗದ್ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಶತಚಂಡಿಕಾ ಯಾಗದ ಪೂರ್ಣಾಹುತಿ, ಮಧ್ಯಾಹ್ನ 12ಗಂಟೆಗೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರಿಂದ ಆಶೀರ್ವಚನ, ಮಂತ್ರಾಕ್ಷತೆ ನಡೆಯುವುದು.