ಕಾಸರಗೋಡು: ಅಂಗಡಿ ಎದುರು ನಿಲ್ಲಿಸಿದ್ದ ಸ್ಕೂಟರ್‍ನಿಂದ 26ಸಾವಿರ ರೂ. ಕಳವುಗೈದ ಚೆಂಗಳ ಸಂತೋಷ್ ನಗರ ನಿವಾಸಿ, ನೆಲ್ಲಿಕಟ್ಟೆ ಶಕ್ತಿನಗರ ನಿವಾಸಿ ಬಿ.ಕೆ ಮೊಯ್ದೀನ್ ನಿಸಾಫ್(38)ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೋವಿಕ್ಕಾನ ಅಮ್ಮಂಗೋಡು ಕೋಳಿಯಡ್ಕ ನಿವಾಸಿ ಪುರುಷೋತ್ತಮ ಎಂಬವರ ಸ್ಕೂಟರ್‍ನಿಂದ ಭಾನುವಾರ ಹಾಡಹಗಲು ಹಣ ಕಳವುಗೈಯಲಾಗಿತ್ತು. ಚೆರ್ಕಳ-ಜಾಲ್ಸೂರ್ ರಸ್ತೆಯ ಎಂಟನೇ ಮೈಲಿಗಲ್ಲಿನಲ್ಲಿರುವ ತಮ್ಮ ಮಾಲಿಕತ್ವದ ಸಂಸ್ಥೆ ಎದುರು ಸ್ಕೂಟರ್ ನಿಲ್ಲಿಸಿ ಸಂಸ್ಥೆ ಕಡೆ ತೆರಳಿದ್ದು, ವಾಪಸಾಗುವಾಗ ಕಳವು ಬೆಳಕಿಗೆ ಬಂದಿದೆ. ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಕಳ್ಳನ ಚಹರೆ ಪತ್ತೆಯಾಗಿದ್ದು, ತಾಸುಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.