ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 273 ಸೂಕ್ಷ್ಮ ಸಂವೇದಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 783 ಮತಗಟ್ಟೆಗಳಿದ್ದು, ಅದರಲ್ಲಿ 273 ಮತಗಟ್ಟೆಗಳು ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ. 42 ಮತಗಟ್ಟೆಗಳು ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿವೆ. 175 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ. 2 ಮತಗಟ್ಟೆಗಳು ನಕ್ಸಲ್ ಬೆದರಿಕೆ ಮತಗಟ್ಟೆಗಳಾಗಿವೆ.
ನಕ್ಸಲ್ ಬೆದರಿಕೆಹೊಂದಿರುವ ಮತಗಟ್ಟೆಗಳೆಂದರೆ ಆದೂರು ಠಾಣೆಯ ಬಳವಂತಡ್ಕ ಅಂಗನವಾಡಿ ಬೂತ್ ಮತ್ತು ಪಯರಡ್ಕ ಎಂಜಿಎಲ್‍ಸಿ ಸ್ಕೂಲ್ ಆಗಿದೆ. ಇಂತಹ ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಇರಿಸಲಾಗುವುದು. ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಕೇಂದ್ರ ಪಡೆಗಳನ್ನು ನೇಮಿಸಲಾಗುವುದು.