ತಿರುವನಂತಪುರಂ: ಲೋಕಸಭೆ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಈ ಅಂತಿಮ ಮತದಾರರ ಪಟ್ಟಿಯಲ್ಲಿ 2,77,49,159 ಮತದಾರರಿದ್ದಾರೆ.
ಒಟ್ಟು ಮತದಾರರಲ್ಲಿ 1,43,33,499 ಮಹಿಳೆಯರು ಮತ್ತು 1,34,15293 ಮಂದಿ ಪುರುಷರು. 367 ತೃತೀಯಲಿಂಗಿಗಳೂ ಈ ಬಾರಿ ಮತ ಚಲಾಯಿಸಲಿದ್ದಾರೆ. 18-19 ವರ್ಷದೊಳಗಿನ 5,34,394 ಚೊಚ್ಚಲ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 6,27,045 ಮಂದಿ ಪಟ್ಟಿಯಲ್ಲಿದ್ದಾರೆ.
ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಜಿಲ್ಲೆಯಲ್ಲಿ 33,93,884 ಮಂದಿ ಮತದಾರರಿದ್ದಾರೆ. ಹೆಚ್ಚಿನ ಮಹಿಳಾ ಮತದಾರರೂ ಇಲ್ಲಿದ್ದಾರೆ. ಒಟ್ಟು 16,97,132 ಮಂದಿ ಮಹಿಳಾ ಮತದಾರರು ಇಲ್ಲಿದ್ದಾರೆ. ತ್ರಿಶೂರ್ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. 14,83,055 ಜನರು ಮತ ಚಲಾಯಿಸಲಿದ್ದಾರೆ. ವಯನಾಡ್ ಅತ್ಯಂತ ಕಡಿಮೆ ಮತದಾರರನ್ನು ಹೊಂದಿದೆ - 6,35,930 ಮಂದಿ ಮತದಾರರಿದ್ದಾರೆ. ಒಟ್ಟು 89,839 ಅನಿವಾಸಿ ಮತದಾರರಿದ್ದಾರೆ. ಅವರಲ್ಲಿ 35,793 ಮಂದಿ ಕೋಯಿಕ್ಕೋಡ್ ಜಿಲ್ಲೆಯವರು.
ಕೇರಳದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.