ಇಸ್ತಾಂಬುಲ್: ನೈಟ್ ಕ್ಲಬ್‌ವೊಂದರ ನವೀಕರಣದ ಸಂದರ್ಭ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 29 ಮಂದಿ ಸಾವಿಗೀಡಾಗಿದ್ದಾರೆ.
ಇಸ್ತಾಂಬುಲ್: ನೈಟ್ ಕ್ಲಬ್‌ವೊಂದರಲ್ಲಿ ಅಗ್ನಿ ಅವಘಡ; 29 ಮಂದಿ ಸಾವು
0
ಏಪ್ರಿಲ್ 03, 2024
Tags
ಇಸ್ತಾಂಬುಲ್: ನೈಟ್ ಕ್ಲಬ್‌ವೊಂದರ ನವೀಕರಣದ ಸಂದರ್ಭ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 29 ಮಂದಿ ಸಾವಿಗೀಡಾಗಿದ್ದಾರೆ.
ಈ ಸಂಬಂಧ ನೈಟ್ ಕ್ಲಬ್ ಮ್ಯಾನೇಜರ್ ಸೇರಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
16 ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿರುವ ಮಾಸ್ಕ್ಯುರಾಡ್ ನೈಟ್ ಕ್ಲಬ್‌ನಲ್ಲಿ ಅವಘಡ ಸಂಭವಿಸಿದೆ.
ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ. ಮೃತರು ನವೀಕರಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿರಬಹುದು ಎಂದು ಇಸ್ತಾಂಬುಲ್ ಗವರ್ನರ್ ಗವರ್ನರ್ ಎಕ್ರೆಮ್ ಇಮಮೊಗ್ಲು ತಿಳಿಸಿದ್ದಾರೆ.
ನವೀಕರಣದ ಹೊಣೆ ಹೊತ್ತಿದ್ದ ವ್ಯಕ್ತಿ ಸೇರಿ ಐವರನ್ನು ಪ್ರಕರಣ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಟ್ಟಡದ ಸುರಕ್ಷತೆ ಪರಿಶೀಲನೆಗೆ ಅಧಿಕಾರಿಗಳು ಸಂಪೂರ್ಣ ಕಟ್ಟಡದ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಗವರ್ನರ್ ತಿಳಿಸಿದ್ದಾರೆ.
ಹಲವು ಅಗ್ನಿಶಾಮಕ ವಾಹನಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.