ತಿರುವನಂತಪುರಂ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಣಕ್ಕೆ 290 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಿನ್ನೆ ಕೊನೆಯ ದಿನವಾಗಿತ್ತು. ಪ್ರಮುಖರು ಸೇರಿದಂತೆ ಅನೇಕರು ತಮ್ಮ ಪತ್ರಗಳನ್ನು ಸಲ್ಲಿಸಿದರು.
ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ 499 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಮಾಹಿತಿ ನೀಡಿದ್ದಾರೆ.
ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ತಿರುವನಂತಪುರಂ ಕ್ಷೇತ್ರದಲ್ಲಿ (22) ಅತಿ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರಲ್ಲಿ ಎಷ್ಟು ಮಂದಿ ಸ್ಪರ್ಧಾತ್ಮಕ ಕಣದಲ್ಲಿ ಇರುತ್ತಾರೆ ಎಂಬುದನ್ನು ಸೂಕ್ಷ್ಮ ಪರೀಕ್ಷೆಯ ನಂತರವೇ ಹೇಳಬಹುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 252 ನಾಮಪತ್ರಗಳು ಸ್ವೀಕೃತವಾಗಿವೆ.
ಏಪ್ರಿಲ್ 8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ಗಡುವು, ಬಳಿಕ ಅಂತಿಮ ಪಟ್ಟಿಯನ್ನು ರಚಿಸಲಾಗುವುದು. ತಿರುವನಂತಪುರಂ 22, ಅಟ್ಟಿಂಗಲ್ 14, ಕೊಲ್ಲಂ 15, ಪತ್ತನಂತಿಟ್ಟ 10, ಮಾವೆಲಿಕ್ಕರ 14, ಆಲಪ್ಪುಳ 14, ಕೊಟ್ಟಾಯಂ 17, ಇಡುಕ್ಕಿ 12, ಎರ್ನಾಕುಳಂ 14, ಚಾಲಕ್ಕುಡಿ 13, ತ್ರಿಶೂರ್ 15, ಅಲತ್ತೂರ್ 8, ಪಾಲಕ್ಕಾಡ್ 16,ಪೊನ್ನಾನಿ 20, ಮಲಪ್ಪುರಂ 14, ಕೋಝಿಕ್ಕೋಡ್ 15, ವಯನಾಡ್ 12, ವಡಗರ 14, ಕಣ್ಣೂರು 18, ಕಾಸರಗೋಡು 13 ಎಂಬಂತೆ ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು.