ಕಾಸರಗೋಡು: ಲೋಕಸ¨ಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧ ಪಟ್ಟು ಸಾರ್ವಜನಿಕರಿಂದ ಸಿ-ವಿಜಿಲ್ ಆ್ಯಪ್ ಮೂಲಕ ಜಿಲ್ಲೆಯಲ್ಲಿ 2925 ದೂರುಗಳು ಲಭಿಸಿವೆ. 2916 ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಆಧಾರರಹಿತವಾದ 9 ದೂರುಗಳನ್ನು ಕೈಬಿಡಲಾಗಿದೆ. 1950 ಟೋಲ್ ಫ್ರೀ ಸಂಖ್ಯೆಯ ಮೂಲಕ 30 ಎಂಸಿಎಂಸಿ ದೂರುಗಳನ್ನು ಸ್ವೀಕರಿಸಲಾಗಿದೆ. ಎಲ್ಲಾ ದೂರುಗಳನ್ನೂ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ತ್ರಿಕರಿಪುರ ಕ್ಷೇತ್ರದಿಂದ 1033, ಕಾಸರಗೋಡಿನಿಂದ 828, ಉದುಮ ಕ್ಷೇತ್ರದಿಂದ 316, ಕಾಞಂಗಾಡ್‍ನಿಂದ 323 ಮತ್ತು ಮಂಜೇಶ್ವರ ಕ್ಷೇತ್ರದಿಂದ 423 ದೂರುಗಳನ್ನು ಸ್ವೀಕರಿಸಲಾಗಿದೆ.
110 ಸಂಶಯ ನಿವಾರಣಾ ದೂರವಾಣಿ ಕರೆಗಳೂ ಬಂದಿವೆ. ಹೆಚ್ಚಿನ ಗುರುತು ಚೀಟಿ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಸಂಶಯ ನಿವಾರಣಾ ಕರೆಗಳಾಗಿದ್ದವು. ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಮಧ್ಯಾಹ್ನ 3ಗಂಟೆಯ ನಂತರ ನಿಯಂತ್ರಣ ಕೊಠಡಿಯು ಕಾರ್ಯಾಚರಣೆಯನ್ನು ಆರಂಭಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣೆಗೆ ಸಂಬಂಧಿಸಿದ ಅನುಮಾನಗಳಿಗೆ ನಿಯಂತ್ರಣ ಕೊಠಡಿಯ ಮೂಲಕ ಪರಿಹಾರ ನೀಡಲಾಗುವುದು. ನಿಯಂತ್ರಣ ಕೊಠಡಿಯು 24 ಗಂಟೆ ಕಾರ್ಯಾಚರಿಸುತ್ತದೆ.