ಕೊಟ್ಟಾಯಕ್ಕಲ್: ವಿಖ್ಯಾತ ಕೋಟ್ಟಕ್ಕಲ್ ಆರ್ಯ ವೈದ್ಯಶಾಲೆಯ ಚಾರಿಟೇಬಲ್ ಆಸ್ಪತ್ರೆ (ಧರ್ಮಾಸುಪತ್ರಿ) ನೂರು ವರ್ಷಗಳ ಸೇವೆಯನ್ನು ಪೂರೈಸುತ್ತಿದೆ.
ಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ವರ್ಷವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿಚಾರ ಸಂಕಿರಣಗಳು, ಉಪನ್ಯಾಸಗಳು, ಪ್ರದರ್ಶನಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ವೈದ್ಯ ರತ್ನಂ ಅವರ ಜೀವನಾಧಾರಿತ ನಾಟಕವೂ ನಡೆಯಲಿದೆ.
ಸಮಾರಂಭದ ಔಪಚಾರಿಕ ಉದ್ಘಾಟನೆ ಮತ್ತು ಲಾಂಛನ ಅನಾವರಣ ಏಪ್ರಿಲ್ 29 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಆರ್ಯವೈದ್ಯಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಹರಿಕುಮಾರ್ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ನಟಿ ಹಾಗೂ ನೃತ್ಯಗಾರ್ತಿ ಆಶಾ ಶರತ್ ಆಗಮಿಸಲಿದ್ದಾರೆ. ಶತಮಾನೋತ್ಸವದ ಲಾಂಛನವನ್ನು ಮ್ಯಾನೇಜಿಂಗ್ ಟ್ರಸ್ಟಿ ಡಾ.ಪಿ.ಎಂ. ವಾರಿಯರ್ ಬಿಡುಗಡೆಗೊಳಿಸುವರು. ಸಭೆಯಲ್ಲಿ ಕೊಟ್ಟಾಯಕಲ್ ಅಲ್ಮಾಸ್ ಆಸ್ಪತ್ರೆ ಸಿಎಂಡಿ ಡಾ.ಪಿ.ಎ. ಕಬೀರ್, ಕೊಟ್ಟಾಯಕಲ್ ವೈದ್ಯರತ್ನಂ ಪಿ.ಎಸ್. ವಾರಿಯರ್ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಸಿವಿ. ಜಯದೇವನ್, ಟ್ರಸ್ಟಿ ಅಡ್ವ.. ಸಿ.ಇ. ಉಣ್ಣಿಕೃಷ್ಣನ್, ಆಸ್ಪತ್ರೆ ಅಧೀಕ್ಷಕ ಡಾ. ಕೆ. ಲೇಖ ಶುಭಹಾರೈಸುವರು.