ಮಹಾರಾಜ್ಗಂಜ್: ಭಾರತ- ನೇಪಾಳ ಗಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ₹2 ಕೋಟಿ ಮೌಲ್ಯದ 200 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಭಾರತ- ನೇಪಾಳ ಗಡಿ: ₹2 ಕೋಟಿ ಮೌಲ್ಯದ ಹೆರಾಯಿನ್ ವಶ, ಇಬ್ಬರ ಬಂಧನ
0
ಏಪ್ರಿಲ್ 19, 2024
Tags
ಮಹಾರಾಜ್ಗಂಜ್: ಭಾರತ- ನೇಪಾಳ ಗಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ₹2 ಕೋಟಿ ಮೌಲ್ಯದ 200 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಜಂಟಿ ತಂಡವು ಈ ಕಾರ್ಯಾಚರಣೆ ನಡೆಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸತ್ಯಂ ಮಾದೇಶಿಯಾ ಮತ್ತು ಆಶಿಶ್ ಪಸ್ವಾನ್ ಸೊನೌಲಿ ಎಂದು ಗುರುತಿಸಲಾಗಿದೆ. ನಿತ್ಯದ ತಪಾಸಣೆ ವೇಳೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರು ಮಾದಕ ವಸ್ತುವನ್ನು ಹಸ್ತಾಂತರಿಸಲು ನೇಪಾಳಕ್ಕೆ ತೆರಳುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮಾದಕ ವಸ್ತುವಿನ ಮೂಲ ಹಾಗೂ ಆರೋಪಿಗಳ ಸಂಪರ್ಕ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.