ಎರಡು ಹಿಂದಿ ಸುದ್ದಿ ಸಂಸ್ಥೆಗಳ ಚಾನೆಲ್ ಗಳ ಮೇಲೆ ನಿರ್ಬಂಧ ವಿಧಿಸಲು ಯುಟ್ಯೂಬ್ ಗೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ (ಎಂಐಬಿ)ದ ಕ್ರಮವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಖಂಡಿಸಿದೆ.

ಸರಕಾರದ ಈ ಕ್ರಮವನ್ನು ಖಂಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹಾಗೂ ಪ್ರೆಸ್ ಅಸೋಸಿಯೇಶನ್, ವಿಶೇಷವಾಗಿ 2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ ಇಂತಹ ಕ್ರಮ ಮಾಧ್ಯಮದ ಮೇಲಿನ ಸೆನ್ಸಾರ್ಶಿಪ್ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿವೆ.