ಟೋಕಿಯೊ: ಜಪಾನ್ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿವೆ. ಈ ಹೆಲಿಕಾಪ್ಟರ್‌ಗಳಲ್ಲಿ ತಲಾ ನಾಲ್ಕರಂತೆ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಎರಡು ಎಸ್‌ಎಚ್-60ಕೆ ಹೆಲಿಕಾಪ್ಟರ್‌ಗಳು ರಾತ್ರಿ ತರಬೇತಿ ವೇಳೆ, ಟೋಕಿಯೊದ ದಕ್ಷಿಣ ಪೆಸಿಫಿಕ್ ಮಹಾಸಾಗರದ ತೊರಿಶಿಮಾ ದ್ವೀಪದ ಬಳಿ ತಡವಾಗಿ ಸಂಪರ್ಕ ಕಳೆದುಕೊಂಡಿತು ಎಂದು ರಕ್ಷಣಾ ಸಚಿವ ಮಿನೋರು ಕಿಹರಾ ಸುದ್ದಿಗಾರರಿಗೆ ತಿಳಿಸಿದರು.