ಹೃದಯಾಘಾತದ ಬಗ್ಗೆ ನಿರ್ಲಕ್ಷ್ಯ ಅಪಾಯಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯರಕ್ತನಾಳದ ಕಾಯಿಲೆಯಿಂದ ಪ್ರತಿ ವರ್ಷ ವಿಶ್ವದಾದ್ಯಂತ 17.9 ಮಿಲಿಯನ್ ಜನರು ಸಾಯುತ್ತಿದ್ದಾರಂತೆ. ಈ ಪೈಕಿ ಐದರಲ್ಲಿ ನಾಲ್ಕು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತವೆ.

ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ವಾಸ್ತವ ತೀರಾ ಭಿನ್ನವಾಗಿದೆ. ಹೃದಯಾಘಾತ ಸಂಭವಿಸುವ ಒಂದು ತಿಂಗಳ ಮೊದಲು, ದೇಹವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಅಂದರೆ, ದೇಹದಲ್ಲಿ ಕೆಲವು ಪ್ರಕ್ರಿಯೆಗಳು ನಡೆಯುತ್ತವೆ. ಹೃದಯಾಘಾತಕ್ಕೂ ಮುನ್ನ ಸುಮಾರು ಒಂದು ತಿಂಗಳ ಹಿಂದೆ ದೇಹದಲ್ಲಿ ಕಂಡುಬರುವ 7 ರೋಗಲಕ್ಷಣಗಳ ಇಲ್ಲಿವೆ ನೋಡಿ..
ಹೃದಯಾಘಾತದ ಆರಂಭಿಕ ಲಕ್ಷಣಗಳು
ಪುರುಷರಿಗಿಂತ ಮಹಿಳೆಯರು ಹೃದಯಾಘಾತದ ಮೊದಲ ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎನ್ನಲಾಘಿದೆ. 50 ರಷ್ಟು ಮಹಿಳೆಯರು ಹೃದಯಾಘಾತಕ್ಕೂ ಮುನ್ನ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಎದೆ ನೋವು ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ.