ಸಾಮಾನ್ಯವಾಗಿ ಪುರುಷರು 30 ವರ್ಷ ವಯಸ್ಸು ದಾಟಿದ ನಂತರ ಅವರ ದೇಹದಲ್ಲಿ ಅನೇಕ ರೀತಿಯ ಹಾರ್ಮೋನುಗಳು ಮತ್ತು ಪೋಷಕಾಂಶಗಳು (Hormones-Nutrients) ಕಡಿಮೆಯಾಗುವುದನ್ನು ನಾವೆಲ್ಲಾ ನೋಡುತ್ತೇವೆ. 30 ವರ್ಷ ವಯಸ್ಸಿನ ನಂತರದಲ್ಲಿ ದೇಹದಲ್ಲಿನ ಬಲವನ್ನು ಹಾಗೆಯೇ ಉಳಿಸಿಕೊಂಡು ಹೋಗಲು ಮತ್ತು ಒಟ್ಟಾರೆ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವಲ್ಲಿ ಕೆಲವು ವಿಟಮಿನ್‌ಗಳು ತುಂಬಾನೇ ಮಹತ್ವದ ಪಾತ್ರವನ್ನು ವಹಿಸುತ್ತವೆ.
30 ವರ್ಷ ವಯಸ್ಸು ದಾಟಿದ ಪ್ರತಿಯೊಬ್ಬ ಪುರುಷನು ಈ ಕೆಳಗಿನ 10 ವಿಟಮಿನ್‌ಗಳ ಅವಶ್ಯಕತೆ ತುಂಬಾನೇ ಇರುತ್ತದೆ. ಬನ್ನಿ ಹಾಗಾದರೆ ಯಾವ ರೀತಿಯ ವಿಟಮಿನ್ ದೇಹಕ್ಕೆ ಹೇಗೆಲ್ಲಾ ಸಹಾಯ ಮಾಡುತ್ತದೆ ಅಂತ ನೋಡಿಕೊಂಡು ಬರೋಣ.
ವಿಟಮಿನ್ ಡಿ
30 ವಯಸ್ಸು ದಾಟಿದ ನಂತರ ದೇಹದಲ್ಲಿರುವ ಟೆಸ್ಟೋಸ್ಟೆರೋನ್ ಅಂಶ ಕಡಿಮೆಯಾಗುತ್ತಾ ಹೋಗುತ್ತದೆಯಂತೆ. ಇದರ ಪರಿಣಾಮ ದೇಹದಲ್ಲಿರುವ ಬಲ ಮತ್ತು ಮೂಳೆಗಳ ಆರೋಗ್ಯ ಸಹ ಕ್ಷೀಣಿಸುತ್ತಾ ಹೋಗುತ್ತದೆಯಂತೆ. ವಿಟಮಿನ್ ಡಿ ಟೆಸ್ಟೋಸ್ಟೆರೋನ್ ಅಂಶವನ್ನು ಹೆಚ್ಚಿಗೆ ಮಾಡುತ್ತದೆ. ಕ್ಯಾಲ್ಸಿಯಮ್ ಅಂಶವನ್ನು ಹೆಚ್ಚಾಗಿ ಹೀರಿಕೊಂಡು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
ಅಷ್ಟೇ ಅಲ್ಲದೆ, ವಿಟಮಿನ್ ಡಿ ಅನೇಕ ರೀತಿಯ ಕ್ಯಾನ್ಸರ್ ವಿಧಗಳಿಂದ ಮತ್ತು ಹೃದಯ ಸಂಬಂಧಿ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ.
ವಿಟಮಿನ್ ಬಿ12
ಕೆಂಪು ರಕ್ತ ಕಣಗಳನ್ನು ಮತ್ತು ನರಮಂಡಲದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾದ ಅಂಶವಾಗಿರುತ್ತದೆ. ವಿಟಮಿನ್ ಬಿ12 ಹೆಚ್ಚಾಗಿ ಪ್ರಾಣಿ ಮಾಂಸಗಳಲ್ಲಿ ಕಂಡು ಬರುತ್ತದೆ ಮತ್ತು ಇದು ದೇಹದಲ್ಲಿನ ಶಕ್ತಿಯನ್ನು ಮತ್ತು ನರಮಂಡಲದ ಕಾರ್ಯವನ್ನು ಹೆಚ್ಚಿಗೆ ಮಾಡಲು ಸಹಾಯ ಮಾಡುತ್ತದೆ.
ವಿಟಮಿನ್ ಬಿ6
ವಿಟಮಿನ್ ಬಿ6 ಅಂಶವು ದೇಹದಲ್ಲಿ ಕೆಂಪು ರಕ್ತ ಕಣಗಳ ಬೆಲೆವಣಿಗೆಗೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ6 ಅಂಶವು ಮೀನು, ಕೋಳಿ ಮತ್ತು ಧಾನ್ಯಗಳಲ್ಲಿ ಕಂಡು ಬರುತ್ತದೆ ಮತ್ತು ಇದು ದೇಹಕ್ಕೆ ಬೇಕಾದ ಸಮತೋಲನವನ್ನು ಒದಗಿಸುತ್ತದೆ. ಬಾದಾಮಿ ಅಂತಹ ಡ್ರೈಫ್ರೂಟ್ಸ್‌ನಲ್ಲಿ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಬಿ6 ಇದೆ.
ವಿಟಮಿನ್
ಮೆಗ್ನೀಸಿಯಮ್
ಹೃದಯ ಆರೋಗ್ಯ ಮತ್ತು ಮೂಳೆಗಳ ಆರೋಗ್ಯಕ್ಕೆ ರಾಮಬಾಣ ಈ ಮೆಗ್ನೀಸಿಯಮ್ ಅಂತ ಹೇಳಲಾಗುತ್ತದೆ. 30 ವರ್ಷ ವಯಸ್ಸಿನ ನಂತರದಲ್ಲಿ ಹೆಚ್ಚಾಗುವ ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ಮೆಗ್ನೀಸಿಯಮ್ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಜಿಂಕ್ (ಸತು)
ದೇಹದಲ್ಲಿರುವ ಟೆಸ್ಟೋಸ್ಟೆರೋನ್ ಅಂಶವನ್ನು ಮತ್ತು ಹಾರ್ಮೋನು ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಅಂತೆ ಈ ಜಿಂಕ್. ಜಿಂಕ್ ಅಂಶವು ಹೆಚ್ಚಾಗಿ ಕುಂಬಳಕಾಯಿ ಬೀಜಗಳಲ್ಲಿ ಕಂಡು ಬರುತ್ತವೆ ಮತ್ತು ಇದನ್ನು ಸೇವಿಸುವುದರಿಂದ ದೇಹಕ್ಕೆ ಜಿಂಕ್ ವಿಟಮಿನ್ ಸಿಗುತ್ತದೆ.
ಒಮೆಗಾ-3
ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ಹೃದಯದ, ಮೆದುಳಿನ, ರಕ್ತ ಕಣಗಳ ಆರೋಗ್ಯವನ್ನು ಬೆಂಬಲಿಸುವ ಕೆಲಸ ಮಾಡುತ್ತವೆ. ನಿಮ್ಮ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುವುದು ಇದರ ಒಂದು ಪ್ರಮುಖವಾದ ಪ್ರಯೋಜನವಾಗಿದೆ. ಒಮೆಗಾ-3 ಅಂಶವು ಕೊಬ್ಬಿನ ಮೀನುಗಳಲ್ಲಿ ಕಂಡು ಬರುತ್ತದೆ.
ಫೋಲೇಟ್
ಕೆಂಪು ರಕ್ತ ಕಣಗಳ ರಚನೆಯಲ್ಲಿ ಮತ್ತು ಆರೋಗ್ಯಕರ ಜೀವಕೋಶದ ಬೆಳವಣಿಗೆ ಮತ್ತು ಕಾರ್ಯಕ್ಕಾಗಿ ಇದು ಮುಖ್ಯವಾಗಿದೆ. ಫೋಲೇಟ್ ಮುಖ್ಯವಾಗಿ ಕಡು ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಬೀನ್ಸ್, ಬಟಾಣಿ ಮತ್ತು ಬೀಜಗಳಲ್ಲಿ ಕಂಡು ಬರುತ್ತದೆ.
ವಿಟಮಿನ್ ಕೆ
ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳ ಬಲಹೀನತೆ ವಿರುದ್ಧ ಹೋರಾಡುತ್ತದೆ. ವಿಟಮಿನ್ ಕೆ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಕೆ ಯ ಉತ್ತಮ ಮೂಲಗಳಲ್ಲಿ ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ಮತ್ತು ಸೋಯಾಬೀನ್ ಮತ್ತು ಕ್ಯಾನೋಲ ತೈಲಗಳು ಸೇರಿವೆ.
ವಿಟಮಿನ್ ಎ
ವಿಟಮಿನ್ ಎ ಕಣ್ಣಿನ ಆರೋಗ್ಯ, ಚರ್ಮದ ಆರೋಗ್ಯ ಮತ್ತು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯಕವಾಗಿದೆ. ಇದು ಪುರುಷರಲ್ಲಿ ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕ್ಯಾರೇಟ್, ಸಿಹಿ ಆಲೂಗಡ್ಡೆ ಮತ್ತು ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡು ಬರುತ್ತದೆ.
ಕಬ್ಬಿಣಾಂಶ
ಕಬ್ಬಿಣಾಂಶವು ದೇಹದಲ್ಲಿನ ಶಕ್ತಿ ಮತ್ತು ಆಕ್ಸಿಜನ್ ಸರಬರಾಜಿಗೆ ತುಂಬಾನೇ ಮುಖ್ಯವಾದದ್ದು ಅಂತ ಹೇಳಬಹುದು. ಕಬ್ಬಿಣಾಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚಿಗೆ ಸೇವಿಸುವುದರಿಂದ ದೇಹದಲ್ಲಿ ಬಲ ಇನ್ನಷ್ಟು ಜಾಸ್ತಿಯಾಗುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.