HEALTH TIPS

ಭಾರತದ 332 ಆಹಾರದಲ್ಲಿ ಕ್ಯಾನ್ಸರ್ ಅಂಶ ಪತ್ತೆ..! ವರದಿ ಅಧ್ಯಯನಕ್ಕೆ ಮುಂದಾದ FSSAI

 ಇತ್ತೀಚಿಗೆ ಕ್ಯಾನ್ಸರ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ನಡುಗಿಸುತ್ತಿದೆ. ಅದರಲ್ಲೂ ಭಾರತ, ಅಮೆರಿಕ, ಇಂಗ್ಲೆಂಡ್ ಸೇರಿ ಹಲವು ರಾಷ್ಟ್ರಗಳಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿರುವವರ ಪ್ರಮಾಣ ನಿತ್ಯ ಏರಿಕೆಯಾಗುತ್ತಿದೆ. ನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದರೆ ನೂರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಈ ಕ್ಯಾನ್ಸರ್‌ಗೆ ಹತ್ತಾರು ರೀತಿಯ ಕಾರಣಗಳಿದ್ದು, ಕೆಲವು ಕಾರಣಗಳು ನಮ್ಮ ನಡುವೆ, ನಮ್ಮ ಸುತ್ತಮುತ್ತಲೇ ಸುತ್ತುತ್ತಿರುತ್ತವೆ. ಅದರಲ್ಲಿ ಆಹಾರವೂ ಒಂದು. ನಾವು ನಿತ್ಯ ಸೇವಿಸು ಆಹಾರ ಕ್ರಮಕ್ಕೂ ಕ್ಯಾನ್ಸರ್‌ಗು ನಿಕಟ ಸಂಬಂಧವಿದೆ. ನಮ್ಮ ಆಹಾರದಲ್ಲಿ ಯಾವ ಅಂಶಗಳು ಬೆರೆಯುತ್ತವೆಯೋ ಅವು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಕ್ಕೂ ಕಾರಣವಾಗಬಹುದು.

ಹೌದು ಇತ್ತೀಚಿಗೆ ನಾವು ಸೇವಿರುತ್ತಿರುವ ಆಹಾರಗಳೇ ನಮ್ಮ ಅನಾರೋಗ್ಯಕ್ಕೆ ಕಾರಣಗಳು ಎಂಬ ಆಘಾತಕಾರಿ ಅಂಶಗಳು ಹೊರಬರುತ್ತಿವೆ, ಇತ್ತೀಚಿಗೆ ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ಮಾಡುತ್ತಿದ್ದ ಗೋಬಿ ಮಂಚೂರಿಯನ್‌ ಅನ್ನು ನಿಷೇಧಿಸಲಾಗಿತ್ತು. ಏಕೆಂದರೆ ಇದರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಪತ್ತೆಯಾಗಿತ್ತು. ಆದರೆ ಇದೀಗ ಭಾರತೀಯ ಮಸಾಲೆ ಅಂಶಗಳಲ್ಲೂ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಇತ್ತೀಚೆಗೆ, ಜನಪ್ರಿಯ ಭಾರತೀಯ ಮಸಾಲೆ ಬ್ರಾಂಡ್‌ಗಳಾದ MDH ಮತ್ತು ಎವರೆಸ್ಟ್‌ಗಳು ಕ್ಯಾನ್ಸರ್-ಉಂಟುಮಾಡುವ ಅಂಶಗಳ ಒಳಗೊಂಡಿವೆ ಎಂದು ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಈ ಎರಡು ಮಸಾಲೆಗಳ ಹಿಂಪಡೆಯಲಾಗಿತ್ತು. ಆದರೆ ಈಗ ಯೂರೋಪಿಯನ್ ಒಕ್ಕೂಟ ಭಾರತದ ಬರೋಬ್ಬರಿ 300ಕ್ಕೂ ಹೆಚ್ಚು ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ವಸ್ತುಗಳ ಗುರುತಿಸಿದ್ದಾರೆ. MDH ಮತ್ತು ಎವರೆಸ್ಟ್‌ನಂತಹ ಸುಪ್ರಸಿದ್ಧ ಭಾರತೀಯ ಸಾಂಬಾರ ಬ್ರಾಂಡ್‌ಗಳು ಎಥಿಲೀನ್ ಆಕ್ಸೈಡ್ ಎಂಬ ರಾಸಾಯನಿಕವನ್ನು ಅನುಮತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ ಎಂಬ ವಿಚಾರ ಸಹ ಬೆಳಕಿಗೆ ಬಂದಿತ್ತು.

ಯುರೋಪಿಯನ್ ಒಕ್ಕೂಟದಲ್ಲಿ ಆಹಾರ ಬಳಕೆಗೆ ಎಥಿಲೀನ್ ಆಕ್ಸೈಡ್ ಅನ್ನು ನಿಷೇಧಿಸಲಾಗಿದೆ. ಆದರೆ ಭಾರತದ ಈ ಆಹಾರ ಪದಾರ್ಥಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಈ ಅಂಶ ಬಳಸುತ್ತಿರುವುದು ಪತ್ತೆಯಾಗಿದೆ. ಇದರಲ್ಲಿ ಬೆಳೆ ಕಾಳು, ಎಳ್ಳು, ಮಸಾಲೆ, ಪ್ಯಾಕ್ ಮಾಡಲಾದ ಆಹಾರಗಳು, ಪಶುಗಳಿಗೆ ನೀಡಲಾಗುವ ಆಹಾರಗಳು, ಸೇರಿ 527 ವಸ್ತುಗಳ ಹೊಂದಿದೆ. ಈ ವಸ್ತುಗಳಲ್ಲಿ 332 ವಸ್ತುಗಳು ಭಾರತದಿಂದ ಬಂದಿರುವುದು ಎಂದು ತಿಳಿದುಬಂದಿದೆ. ಸುರಕ್ಷತಾ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು FSSAI ಈ ಮಸಾಲೆಗಳು ಮತ್ತು ಇತರ ಆಹಾರ ಉತ್ಪನ್ನಗಳ ಮೇಲೆ ಸಂಪೂರ್ಣ ಗುಣಮಟ್ಟದ ತಪಾಸಣೆಯನ್ನು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ ಆರೋಪ ಸಾಬೀತಾದರೆ ಭಾರತದಲ್ಲೂ ಹಲವು ಬ್ರಾಂಡ್‌ಗಳ ವಸ್ತುಗಳ ಮೇಲೆ ಪರಿಣಾಮ ಬೀರಬಹುದು. ಹಾಗೇನಾದರು FSSAI ಕ್ರಮಕ್ಕೆ ಮುಂದಾದರೆ ಹಲವು ವಸ್ತುಗಳ ನಿಷೇಧಕ್ಕೂ ಮುಂದಾಗಬಹುದು. 
ಎಥಿಲೀನ್ ಆಕ್ಸೈಡ್ ಎಂದರೇನು?
ಎಥಿಲೀನ್ ಆಕ್ಸೈಡ್, ಸಾಮಾನ್ಯವಾಗಿ ಕೀಟನಾಶಕವಾಗಿ ಮತ್ತು ಕ್ರಿಮಿನಾಶಕಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆರಂಭದಲ್ಲಿ ವೈದ್ಯಕೀಯ ಉಪಕರಣಗಳಲ್ಲಿ ಸೋಂಕು ಹರಡುವ ಕ್ರಮಿಗಳ ನಾಶಪಡಿಸಲು ಈ ರಾಸಾಯನಿಕ ಬಳಸಲಾಗಿತ್ತು. ಬಳಿಕ ಕೃಷಿಯಲ್ಲಿ ಹೆಚ್ಚಾಗಿ ಬಳಕೆಗೆ ಬಂದಿತು. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಎಥಿಲೀನ್ ಆಕ್ಸೈಡ್ ಅನ್ನು ಗ್ರೂಪ್ 1 ಕಾರ್ಸಿನೋಜೆನ್ ಎಂದು ವರ್ಗೀಕರಿಸುತ್ತದೆ, ಅಂದರೆ ಇದು ಮಾನವರಲ್ಲಿ ಕ್ಯಾನ್ಸರ್ ಅನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದರ್ಥ. ಎಥಿಲೀನ್ ಆಕ್ಸೈಡ್‌ ಮಾನವರ ದೇಹ ಸೇರುವುದುದರಿಂದ ನಮ್ಮಲ್ಲಿ ಲಿಂಫೋಮಾ ಮತ್ತು ಲ್ಯುಕೇಮಿಯಾದಂತಹ ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ಡಿಎನ್‌ಎಗೆ ಹಾನಿ ಮಾಡುತ್ತದೆ. ಈ ರಾಸಾಯನಿಕ ಬೆರೆತಿರುವ ಆಹಾರ ಸೇವಿಸುವುದು ಮಾತ್ರವಲ್ಲ ಈ ರಾಸಾಯನಿಕವನ್ನು ಬರಿಗೈಯಲ್ಲಿ ಸ್ಪರ್ಶಿಸುವುದು ಸಹ ಹಾನಿಕಾರಕ. ಇದನ್ನು ಆಹಾರಗಳಲ್ಲಿ ಬಳಸುವುದರಿಂದ ಆಹಾರವನ್ನು ಬಹಳ ಕಾಲ ಹಾಳಾಗದಂತೆ ಇಡಬಹುದು. ಹೀಗಾಗಿಯೇ ವಿದೇಶಗಳಿಗೆ ರಫ್ತಾಗುವ ಮಸಾಲ ಪದಾರ್ಥಗಳು ಸೇರಿದಂತೆ ಪ್ಯಾಕ್ ಮಾಡಲಾದ ಬೇಳೆ ಕಾಳುಗಳು, ಆಹಾರಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಅದರಲ್ಲೂ ಅಗತ್ಯ ಪ್ರಮಾಣಕ್ಕಿಂತ ಹಚ್ಚಿನ ಪ್ರಮಾಣದ ಎಥಿಲೀನ್ ಆಕ್ಸೈಡ್‌ ಬೆರೆಸಲಾಗುತ್ತಿರುವುದು ಯುರೋಪಿಯನ್ ಒಕ್ಕೂಟದ ಅಧ್ಯಯನದಲ್ಲಿ ತಿಳಿದುಬಂದಿದೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries