ಮಲಪ್ಪುರಂ: ಪೊನ್ನಾನಿಯಲ್ಲಿ ಅನಿವಾಸಿಗರೊಬ್ಬರ ಮನೆಗೆ ನುಗ್ಗಿ ಸುಮಾರು 350 ಪವನ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಪೊನ್ನಾನಿ ಮೂಲದ ರಾಜೀವ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಪೊನ್ನಾನಿ ಐಶ್ವರ್ಯ ಥಿಯೇಟರ್ ಬಳಿ ಈ ಮನೆ ಇದೆ. ಚಿನ್ನವನ್ನು ಮನೆಯ ಲಾಕರ್‍ನಲ್ಲಿ ಇರಿಸಲಾಗಿತ್ತು. ರಾಜೀವ್ ಮತ್ತು ಅವರ ಕುಟುಂಬ ದುಬೈನಲ್ಲಿದೆ. ರಾಜೀವ್ ಎರಡು ವಾರಗಳ ಹಿಂದೆ ಕುಟುಂಬ ಸಹಿತ ಗಲ್ಫ್ ಗೆ ತೆರಳಿದ್ದರು.
ಕಾರ್ಮಿಕರು ಮನೆ ಸ್ವಚ್ಛಗೊಳಿಸಲು ಬಂದಾಗ ಕಳ್ಳತನ ನಡೆದಿರುವುದು ತಿಳಿದುಬಂತು. ಮನೆಯ ಹಿಂಬದಿಯ ಗ್ರಿಲ್ ಮುರಿದಿರುವುದು ಕಂಡುಬಂದಿದೆ. ಕೊಠಡಿಗಳು, ಕಪಾಟುಗಳು ತೆರೆದಿರುವುದು ಕಂಡುಬಂತು. ಮಾಹಿತಿ ಮೇರೆಗೆ ಸಂಬಂಧಿಕರು ರಾಜೀವ್ ಅವರಿಗೆ ಮಾಹಿತಿ ನೀಡಿದ್ದಾರೆ.
ನಂತರದ ತನಿಖೆಯಲ್ಲಿ ಎರಡು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮಲಪ್ಪುರಂ ಎಸ್ಪಿ, ತಿರೂರ್ ಡಿವೈಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹೆಚ್ಚಿನ ಪರಿಶೀಲನೆಯ ನಂತರವೇ ಕಾಣೆಯಾದ ವಸ್ತುಗಳ ನಿಖರವಾದ ವಿವರಗಳು ಲಭ್ಯವಾಗುತ್ತವೆ. ಮಲಪ್ಪುರಂ ಎಸ್ಪಿ ನೇತೃತ್ವದಲ್ಲಿ ತಿರೂರ್ ಡಿವೈಎಸ್ಪಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.