ಮೊರಾದಾಬಾದ್: ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವ ಅಮಿತ್ ಶಾ ಅವರು, '370ನೇ ವಿಧಿಯನ್ನು ಆ ಪಕ್ಷವು ದಶಕಗಳ ಕಾಲ ಮಡಿಲಲ್ಲಿರಿಸಿ ಮಗುವಿನಂತೆ ಮುದ್ದು ಮಾಡಿದೆ' ಎಂದು ಶುಕ್ರವಾರ ಇಲ್ಲಿ ಹೇಳಿದರು.
ಮೊರಾದಾಬಾದ್: ಕಾಶ್ಮೀರ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವ ಅಮಿತ್ ಶಾ ಅವರು, '370ನೇ ವಿಧಿಯನ್ನು ಆ ಪಕ್ಷವು ದಶಕಗಳ ಕಾಲ ಮಡಿಲಲ್ಲಿರಿಸಿ ಮಗುವಿನಂತೆ ಮುದ್ದು ಮಾಡಿದೆ' ಎಂದು ಶುಕ್ರವಾರ ಇಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬೇರೆ ರಾಜ್ಯಗಳಲ್ಲಿ ಚುನಾವಣಾ ರ್‍ಯಾಲಿಗಳನ್ನುದ್ದೇಶಿಸಿ ಮಾತನಾಡುವಾಗ ಜಮ್ಮ ಮತ್ತು ಕಾಶ್ಮೀರದ ವಿಚಾರಗಳನ್ನು ಪ್ರಸ್ತಾಪಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈಚೆಗೆ ನೀಡಿದ್ದ ಸಲಹೆಗೆ ಪ್ರತಿಕ್ರಿಯಿಸಿದ ಶಾ ಅವರು, 'ಉತ್ತರ ಪ್ರದೇಶ ಮತ್ತು ರಾಜಸ್ಥಾನದವರು ಕಾಶ್ಮೀರದ ಜೊತೆ ಏನು ಸಂಬಂಧ ಹೊಂದಿದ್ದಾರೆ ಎಂದು ಖರ್ಗೆ ಅವರು ಕೇಳುತ್ತಿದ್ದಾರೆ. ಕಾಶ್ಮೀರ ನಮ್ಮದಲ್ಲವೇ' ಎಂದು ಪ್ರಶ್ನಿಸಿದರು. ಮೊರಾದಾಬಾದ್‌ನ ಪ್ರತಿ ಮಗುವೂ ಕಾಶ್ಮೀರಕ್ಕಾಗಿ ಜೀವ ನೀಡಲು ಸಿದ್ಧವಿದೆ ಎಂದೂ ಹೇಳಿದರು.