ಎಪ್ರಿಲ್ 4, 1984ರಂದು, ಇಂದಿಗೆ ಸರಿಯಾಗಿ 40 ವರ್ಷಗಳ ಹಿಂದೆ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮ ಹಾಗೂ ಸೋವಿಯತ್ ಒಕ್ಕೂಟದ ಇನ್ನಿಬ್ಬರು ಗಗನ ಯಾತ್ರಿಗಳು ಟಿ-11 ಗಗನ ನೌಕೆಯನ್ನೇರಿ, ಕಕ್ಷೆಯಲ್ಲಿ ಸುತ್ತುವ ಪ್ರಯೋಗಾಲಯ ಸಲ್ಯೂಟ್ 7ನೊಂದಿಗೆ ಚಂದ್ರನ ಮೇಲೆ ಕಾಲಿರಿಸಿದ್ದರು.
ಚಂಡೀಗಢ ಗಲಭೆಗಳು
ಈ ಅವಿಸ್ಮರಣೀಯ ಇತಿಹಾಸ ದಾಖಲಾಗುವ ಸಂದರ್ಭದಲ್ಲಿಯೇ, ಚಂಡೀಗಢದಲ್ಲಿ ರಾಜ್ಯಸಭಾ ಸದಸ್ಯ ಪ್ರೊ.ವಿ.ಎನ್.ತಿವಾರಿಯವರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಇದೇ ವೇಳೆ ಅಮೃತಸರದಲ್ಲಿ ಬಿಜೆಪಿ ನಾಯಕ ಹರ್ಬನ್ಸ್ ಲಾಲ್ ಖನ್ನಾ ಅವರ ಅಂತ್ಯಕ್ರಿಯೆ ಮೆರವಣಿಗೆಯ ವೇಳೆ ಗುಂಪು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದು, 10 ಮಂದಿ ಮೃತಪಟ್ಟಿದ್ದರು. ಇದರಿಂದ ಪಂಜಾಬ್ ಹಾಗೂ ಚಂಡೀಗಢ ಅಕ್ಷರಶಃ ಬಂದ್ ಆಗಿತ್ತು. ವಿದ್ಯಾರ್ಥಿಗಳಂತೆ ಸೋಗು ಹಾಕಿಕೊಂಡು ತಮ್ಮ ನಿವಾಸಕ್ಕೆ ಬಂದಿದ್ದ ದುಷ್ಕರ್ಮಿಗಳನ್ನು ಭೇಟಿ ಮಾಡಲು ತಿವಾರಿ ತಮ್ಮ ನಿವಾಸದಿಂದ ಹೊರಗೆ ಬಂದಾಗ, ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿತ್ತು. ಇದರಿಂದ ಪಂಜಾಬ್ ತೀವ್ರ ಪ್ರಕ್ಷುಬ್ಧಗೊಂಡಿತ್ತು.
ಪಂಜಾಬ್ ನಲ್ಲಿ ಅಫ್ಸ್ಪಾ ಜಾರಿ
ಭಯೋತ್ಪಾದನೆಯ ವಿರುದ್ಧದ ಮಹತ್ವದ ನಡೆಯಲ್ಲಿ ಪಂಜಾಬ್ ಸರಕಾರವು ಪೊಲೀಸರು ಹಾಗೂ ಅರೆ ಸೇನಾಪಡೆಗಳಿಗೆ ಮೂರು ತಿಂಗಳ ಕಾಲ ಸಶಸ್ತ್ರ ಪಡೆಗಳ (ಪಂಜಾಬ್ ಮತ್ತು ಚಂಡೀಗಢ) ವಿಶೇಷಾಧಿಕಾರ ಕಾಯ್ದೆ' 1983ರ ಅಡಿ ನಿರಂಕುಶಾಧಿಕಾರ ನೀಡಿತ್ತು. ಪಂಜಾಬ್ ನಲ್ಲಿ ಉಲ್ಬಣಗೊಂಡಿದ್ದ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಗುಂಪು ಹಿಂಸಾಚಾರಗಳ ಕಾರಣಕ್ಕೆ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂಸಾಚಾರವನ್ನು ಹತ್ತಿಕ್ಕಲು ರಾಜ್ಯ ಸರಕಾರವು ಎರಡನೆಯ ಬಾರಿಗೆ ಈ ವಿಶೇಷಾಧಿಕಾರವನ್ನು ಜಾರಿಗೊಳಿಸಿತ್ತು.
ಚಂದ್ರ ಯಾನದ ಕುರಿತು ಪ್ರಧಾನಿ ಮಾತುಗಳು
ಪಂಜಾಬ್ ರಾಜ್ಯ ಪ್ರಕ್ಷುಬ್ಧಗೊಂಡಿದ್ದ ಗಳಿಗೆಯಲ್ಲೇ ನಡೆದಿದ್ದ ಈ ಐತಿಹಾಸಿಕ ಮಹತ್ಸಾಧನೆಯನ್ನು ಶ್ಲಾಘಿಸಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಪ್ರಪ್ರಥಮ ಭಾರತೀಯ ಗಗನ ಯಾತ್ರಿಯು ಯಶಸ್ವಿ ಚಂದ್ರ ಯಾನ ಮಾಡುವ ಮೂಲಕ ಭಾರತ ಮತ್ತು ಸೋವಿಯತ್ ಒಕ್ಕೂಟದ ಸಂಬಂಧವು ಹೊಸ ಆಯಾಮಕ್ಕೆ ತಲುಪಿದೆ ಎಂದು ಹೇಳಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣ ಎಂದೂ ಅವರು ಪ್ರಶಂಸಿಸಿದ್ದರು. ಭಾರತದ ಪ್ರಪ್ರಥಮ ಗಗನ ಯಾತ್ರಿಯು ಭಾರತದ ಮಹಾತ್ಮ ಗಾಂಧೀಜಿ ಹಾಗೂ ಜವಾಹರ ಲಾಲ್ ನೆಹರೂ ಅವರ ಶಾಂತಿ ಪರಂಪರೆಯ ಸಂದೇಶದ ಪ್ರತೀಕವಾಗಲಿದ್ದಾರೆ ಎಂದು ಹೇಳಿದ್ದರು.