ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 420 ಅಗತ್ಯ ಸೇವೆಗಳ ಮತದಾರರು ಅಂಚೆ ಮತದಾನ ಕೇಂದ್ರಗಳಲ್ಲಿ ಮತದಾನ ಮಾಡಿದ್ದಾರೆ. ಮಂಜೇಶ್ವರ ಮಂಡಲದಲ್ಲಿ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ ಒಬ್ಬ ಅಗತ್ಯ ಸೇವಾ ನೌಕರರು ಮತದಾನ ಮಾಡಿದ್ದಾರೆ. ಕಾಸರಗೋಡು ಮಂಡಲದಲ್ಲಿ 16 ಮಂದಿ, ಉದುಮ ಮಂಡಲದಲ್ಲಿ 33 ಮಂದಿ, ಕಾಞಂಗಾಡ್ ಮಂಡಲದಲ್ಲಿ 36 ಮಂದಿ, ತ್ರಿಕ್ಕರಿಪುರ ಮಂಡಲದಲ್ಲಿ 81 ಮಂದಿ ,ಪಯ್ಯನ್ನೂ ರು ಮಂಡಲದಲ್ಲಿ 156 ಮಂದಿ, ಕಲ್ಯಾಶ್ಶೇರಿ ಮಂಡಲದಲ್ಲಿ 97 ಮಂದಿ ಮತದಾನ ಮಾಡಿದ್ದಾರೆ.
ಅಗತ್ಯ ಸೇವಾ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದ 711 ಮಂದಿಯಲ್ಲಿ 420 ಮಂದಿ ಇಷ್ಟರವರೆಗೆ ಮತದಾನ ನಡೆಸಿದ್ದಾರೆ. ಮಂಜೇಶ್ವರ ಮಂಡಲದಲ್ಲಿ ಜಿ ಎಚ್ ಎಸ್ ಎಸ್ ಕುಂಬಳೆ, ಕಾಸರಗೋಡು ಮಂಡಲದಲ್ಲಿ ಸರ್ಕಾರಿ ಕಾಲೇಜು ಕಾಸರಗೋಡು, ಉದುಮ ಮಂಡಲದಲ್ಲಿ ಚಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ,ಕಾಞಂಗಾಡ್ ಮಂಡಲದಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್, ತ್ರಿಕರಿಪುರ ಮಂಡಲದಲ್ಲಿ ಸ್ವಾಮಿ ನಿತ್ಯಾನಂದ ಪೋಲಿಟೆಕ್ನಿಕ್, ಪಯ್ಯನ್ನೂರು ಮಂಡಲದಲ್ಲಿ ಎಂ. ಕುಂಞÂ್ಞರಾಮನ್ ಆದಿಯೋಡಿ ಸ್ಮಾರಕ ಜಿವಿಎಚ್‍ಎಸ್ ಪಯ್ಯನ್ನೂರು ಮತ್ತು ಕಲ್ಯಾಶ್ಶೇರಿ ಮಂಡಲದ ಕೆಪಿಆರ್ ಸ್ಮಾರಕ ಎಚ್‍ಎಸ್‍ಎಸ್ ಕಲ್ಯಾಶ್ಶೇರಿ ಎಂಬೀ ಸ್ಥಳಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪೆÇಲೀಸ್, ಅಗ್ನಿಶಾಮಕ ಇಲಾಖೆ, ಜೈಲು, ಅಬಕಾರಿ, ಮಿಲ್ಮಾ , ಕೆ ಎಸ್ ಇ ಬಿ, ಜಲ ಪ್ರಾಧಿಕಾರ, ಕೆ ಎಸ್ ಆರ್ ಟಿ ಸಿ, ಖಜಾನೆ ಸೇವೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಆಕಾಶವಾಣಿ, ದೂರದರ್ಶನದಂತಹ ಕೇಂದ್ರ ಸರ್ಕಾರಿ ಸಂಸ್ಥೆಗಳು, ಬಿ ಎಸ್ ಎನ್ ಎಲ್ ಅಧಿಕಾರಿಗಳು, ರೈಲ್ವೆ, ಅಂಚೆ ಮತ್ತು ಟೆಲಿಗ್ರಾಫ್, ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ ಮತ್ತು ಪತ್ರಕರ್ತರನ್ನು ಅಗತ್ಯ ಸೇವಾ ವಿಭಾಗದಲ್ಲಿ ಸೇರಿಸಿ ಅಂಚೆ ಮತ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.