ಕೋಝಿಕ್ಕೋಡ್: 47 ಕೋಟಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಎಲ್‍ಡಿಎಫ್ ಕೌನ್ಸಿಲರ್ ಒಬ್ಬರನ್ನು ಬಂಧ|ಇಸಲಾಗಿದೆ.
ಕೋಡುವಳ್ಳಿ ನಗರಸಭೆ 12ನೇ ವಾರ್ಡ್ ಕೌನ್ಸಿಲರ್ ಅಹ್ಮದ್ ಉನೈಸ್ ಅವರನ್ನು ಪೆÇಲೀಸರು ಬಂಧಿಸಿದ್ದಾರೆ.
ಇವರು ನ್ಯಾಷನಲ್ ಸೆಕ್ಯುಲರ್ ಕಾನ್ಫರೆನ್ಸ್ ಸದಸ್ಯರಾಗಿದ್ದಾರೆ.ಹೈದರಾಬಾದ್ ಪೆÇಲೀಸರು ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖಾ ತಂಡ ಹೈದರಾಬಾದ್‍ನಿಂದ ಕೋಝಿಕ್ಕೋಡ್ ತಲುಪಿ ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಆರೋಪಿಯನ್ನು ಬಂಧಿಸಲು ಕೊಡುವಳ್ಳಿ ಪೋಲೀಸರೂ ಸಹಕರಿಸಿದ್ದಾರೆ.