ಕಾಸರಗೋಡು :ಲೋಕಸಭಾ ಕ್ಷೇತ್ರದಲ್ಲಿ 4726 ಪುರುಷ ಹಾಗೂ 208 ಮಹಿಳಾ ಸೇರಿದಣತೆ ಒಟ್ಟು 4934 ಅನಿವಾಸಿ ಮತದಾರರಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ ಒಟ್ಟು 620 ಅನಿವಾಸಿ ಮತದಾರರಿದ್ದು, ಇದರಲ್ಲಿ 598 ಪುರುಷ ಮತ್ತು 22 ಮಹಿಳೆಯರು, ಕಾಸರಗೋಡು ಕ್ಷೇತ್ರದಲ್ಲಿ ಒಟ್ಟು 226 ಅನಿವಾಸಿ ಮತದಾರಲ್ಲಿ 204 ಪುರುಷ ಮತ್ತು 22 ಮಹಿಳೆಯರು, ಉದುಮ ಕ್ಷೇತ್ರದಲ್ಲಿ ಒಟ್ಟು 338 ಅನಿವಾಸಿ ಮತದಾರರಲ್ಲಿ 315 ಪುರುಷ ಮತ್ತು 23 ಮಹಿಳೆಯರು, ಕಾಞಂಗಾಡು ಕ್ಷೇತ್ರದಲ್ಲಿ ಒಟ್ಟು 864 ಅನಿವಾಸಿ ಮತದಾರರಲ್ಲಿ 834 ಪುರುಷ ಮತ್ತು 30 ಮಹಿಳೆಯರು, ತ್ರಿಕರಿಪುರ ಕ್ಷೇತ್ರದಲ್ಲಿ 1206 ಪುರುಷ ಮತ್ತು 36 ಮಹಿಳಾ ಮತದಾರರು ಸೇರಿ ಒಟ್ಟು 1242 ಅನಿವಾಸಿ ಮತದಾರರು, ಪಯ್ಯನ್ನೂರು ಕ್ಷೇತ್ರದಲ್ಲಿ 447 ಪುರುಷ ಮತ್ತು 30 ಮಹಿಳಾ ಮತದಾರರು ಸೇರಿದಂತೆ 477 ಅನಿವಾಸಿ ಮತದಾರರು, ಕಲ್ಯಾಶ್ಶೇರಿ ಕ್ಷೇತ್ರದಲ್ಲಿ ಒಟ್ಟು 1167 ಅನಿವಾಸಿ ಮತದಾರರಲ್ಲಿ 1122 ಪುರುಷ ಮತ್ತು 45 ಮಹಿಳಾ ಮತದಾರಿದ್ದಾರೆ.